ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.
ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) – ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
20 ವರ್ಷಗಳ ನಂತರ ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸಂಘಟನೆ, ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳೊಂದಿನ ನಂಟು ಹೊಂದಿರುವ ಕುರಿತು ಮೌನ ತಾಳಿರುವುದಕ್ಕೆ ಇಡೀ ವಿಶ್ವ ಸಮುದಾಯ ಕಳವಳ ವ್ಯಕ್ತಪಡಿಸುತ್ತಿದೆ. ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್ ಉಗ್ರರು ಕೆಲ ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಮಹಿಳೆಯರು ಹಾಗೂ ಮಾನವ ಹಕ್ಕುಗಳಿಗೆ ಗೌರವ ನೀಡುವುದಾಗಿ ತಿಳಿಸಿದ್ದರು. ಆದರೆ, ಉಗ್ರ ಸಂಘಟನೆಗಳೊಂದಿಗಿನ ನಂಟು ಕುರಿತು, ಸ್ಥಳೀಯ ಉಗ್ರ ಸಂಘಟನೆಗಳ ನಂಟು ಕುರಿತ ಮೌನ ತಾಳಿದ್ದರು.
ಅದು ಅಲ್ದೇ ತಾಲಿಬಾನ್ ಗೆ ಪಾಕಿಸ್ತಾನ ಸಪೋರ್ಟ್ ಮಾಡ್ತಿರೋದು ಬಾರತಕ್ಕೂ ಕೂಡ ಎಚ್ಚರಿಕೆಯ ಗಂಟೆಯೇ.. ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಚೀನಾ ಹಾಗೂ ಪಾಕಿಸ್ತಾನದ ಬೆಂಬಲದಿಂದ ಕೊಬ್ಬೆಚ್ಚಿಸಿಕೊಂಡಿರುವ ತಾಲೀಬಾನಿಗಳು ಮುಂದೆ ಭಾರತ ಹಾಗೂ ಅಮೆರಿಕಾದ ವಿರುದ್ಧ ಒಟ್ಟಾಗಿ ಮುಗುಬೀಳುವ ಸಾಧ್ಯತೆಯಿದೆ.