ಪುರುಷ ಸಂಬಂಧಿಕರು ಜೊತೆ ಇಲ್ಲದೇ ಇದ್ದರೆ , ಮಹಿಳೆಯರು ಪ್ರಯಾಣಿಸುವಂತಿಲ್ಲ : ತಾಲಿಬಾನ್
ಅಫ್ಗಾನ್ : ಅಫ್ಗಾನ್ ನಲ್ಲಿ ಅಕ್ರಮವಾಗಿ ಸರ್ಕಾರವನ್ನ ಉರುಳಿಸಿ ಆಡಳಿತನ್ನ ತನ್ನ ಕೈಗೆ ತೆಗೆದುಕೊಂಡಿರುವ ನರ ರೂಪಿ ರಾಕ್ಷಸರಾದ ತಾಲಿಬಾನಿಗಳು ಸರ್ಕಾರ ರಚಿಸಿ ಅಧಿಕಾರ ಮಾಡ್ತಾ ಜನರ ಮೇಲೆ ಅದ್ರಲ್ಲೂ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ.. ಮಹಿಳೆಯರ ಸಂಪೂರ್ಣ ಸ್ವಾತಂತ್ರವನ್ನೇ ಕಸಿದುಕೊಂಡಿದ್ದಾರೆ..
ಇದೀಗ ಪುರುಷ ಸಂಬಂಧಿಗಳು ಜೊತೆಯಲ್ಲಿಲ್ಲದಿದ್ದರೆ ಮಹಿಳೆಯರು ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆದೇಶ ಹೊರಡಿಸಿದೆ.
ಬುರ್ಕಾ ಧರಿಸಿರುವ ಮಹಿಳೆಯರು ವಾಹನಗಳಲ್ಲಿ ಪ್ರಯಾಣಿಸಬಹುದು. ಬುರ್ಕಾ ಧರಿಸದವರನ್ನು ವಾಹನಗಳಲ್ಲಿ ಕೂರಿಸಿಕೊಳ್ಳುವಂತಿಲ್ಲ ಎಂದು ಆದೇಶ ನೀಡಲಾಗಿದೆ.
72 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುವ ಮಹಿಳೆಯರ ಜೊತೆಯಲ್ಲಿ ಕುಟುಂಬದ ಪುರುಷ ಸಂಬಂಧಿಗಳು ಇರಲೇಬೇಕು ಇಲ್ಲದಿದ್ದರೆ ಅಂತಹವರಿಗೆ ಪ್ರವಾಸ ನಿಷಿದ್ಧ ಎಂದು ತಾಲಿಬಾನ್ ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಹಜಿರ್ ತಿಳಿಸಿದ್ದಾನೆ.
ಈ ಮಾರ್ಗಸೂಚಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿಯರನ್ನು ಒಳಗೊಂಡ ನಾಟಕಗಳು ಮತ್ತು ಸೋಪ್ ಜಾಹೀರಾತುಗಳನ್ನು ನಿಲ್ಲಿಸುವಂತೆ ಸಚಿವಾಲಯವು ದೂದರ್ಶನ ಚಾನೆಲ್ಗಳಿಗೆ ಸೂಚನೆ ನೀಡಿದ ಕೆಲ ದಿನಗಳಲ್ಲೇ ಈ ಮಾರ್ಗಸೂಚಿ ಹೊರಡಿಸಿದೆ.
ಅಲ್ಲದೇ ಮಹಿಳಾ ಪತ್ರಕರ್ತರು ದೂರದರ್ಶನದಲ್ಲಿ ಸುದ್ದಿಗಳನ್ನು ವಾಚಿಸುವಾಗ ಕಡ್ಡಾಯವಾಗಿ ಬುರ್ಕಾ ಧರಿಸಬೇಕು ಎಂದು ಸೂಚನೆ ನೀಡಿದೆ. ವಾಹನಗಳಲ್ಲಿ ಯಾರೂ ಸಹ ಹಾಡುಗಳನ್ನು ಹಾಕಬಾರದು. ಸಾರಿಗೆ ವ್ಯವಸ್ಥೆ ಬಯಸುವ ಮಹಿಳೆಯರು ಬುರ್ಕಾ ಧರಿಸಲೇ ಬೇಕು ಎಂದು ತಿಳಿಸಿದೆ.