Afganisthan : ಮಹಿಳಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪುನರಾರಂಭ
ಅಫ್ಗಾನಿಸ್ತಾನ : ತಾಲಿಬಾನ್ ಅಫ್ಗಾನ್ ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.. ಮಹಿಳೆಯರ ಹಕ್ಕುಗಳನ್ನ ಕಿತ್ತುಕೊಳ್ಳಲಾಗಿದೆ.. ಆದ್ರೆ ಇದೀಗ 34 ಪ್ರಾಂತ್ಯಗಳ ಪೈಕಿ 6 ಪ್ರಾಂತ್ಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ ಎಂದು ತಾಲಿಬಾನ್ ತಿಳಿಸಿದೆ.
taliban alloos to reopen universities for womens
ತಾಲಿಬಾನ್ ಮಹಿಳೆಯರನ್ನು ಆರೋಗ್ಯ ಹಾಗೂ ಬೋಧನಾ ವಲಯಗಳನ್ನು ಹೊರತು ಪಡಿಸಿ ಇತರ ಉದ್ಯೋಗಗಳಿಂದ ನಿರ್ಬಂಧಿಸಿದೆ. ಹುಡುಗಿಯರು 6ನೇ ತರಗತಿಯ ಬಳಿಕ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಹಿಳೆಯರಿಗೆ ಹಿಜಬ್ ಧರಿಸಲು ಒತ್ತಾಯಿಸಲಾಗಿದೆ. ತಾಲಿಬಾನ್ ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ನಂಗರ್‌ಹಾರ್, ಕಂದಹಾರ್, ಹೆಲ್ಮಂಡ್, ಫರಾಹ್, ನಿಮ್ರೋಜ್ ಹಾಗೂ ಲಗ್ಮನ್ ಪ್ರಾಂತ್ಯಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಮಹಿಳೆಯರಿಗೂ ತೆರೆಯಲಾಗಿದೆ. ಅಫ್ಘಾನಿಸ್ತಾನದಲ್ಲಿ ಮಾರ್ಚ್ ಅಂತ್ಯದ ವೇಳೆ ಎಲ್ಲಾ ಹೆಣ್ಣು ಮಕ್ಕಳು ಶಾಲೆಗೆ ಮರಳಲಿದ್ದಾರೆ ಎಂದು ತಾಲಿಬಾನ್ ಭರವಸೆ ನೀಡಿದೆ.









