ಅಫ್ಘಾನ್ ನಲ್ಲಿ ತಾಲಿಬಾನ್ ಅಧಿಪತ್ಯ : ಪ್ರಾಣ ಉಳಿಸಿಕೊಳ್ಳಲು ಜನ ಪರದಾಟ Taliban saaksha tv
ಅಫ್ಘಾನ್ : ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನ್ ನಲ್ಲಿ ತಾಲಿಬಾನ್ ಅಧಿಪತ್ಯ ಸಾಧಿಸಿದ್ದು, ಹಿಂಸಾಚಾರ ಬುಗಿಲೆದ್ದಿದೆ.
ಅಫ್ಘಾನ್ ರಾಜಧಾನಿ ಕಾಬೂಲ್ನಾದ್ಯಂತ ನಿಯೋಜನೆಗೊಂಡಿರುವ ತಾಲಿಬಾನ್ ಉಗ್ರರು, ಪೆÇಲೀಸ್ ಸಿಬ್ಬಂದಿ ಬಿಟ್ಟು ಪಲಾಯನ ಮಾಡಿರುವ ಠಾಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಹಲವು ನಗರ, ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತ್ತಾ ಅಮಾಯಕ ಜನರ ಮನೆಗಳಿಗೆ ನುಗ್ಗಿ ಲೂಟಿ ಮಾಡುತ್ತಿದ್ದಾರೆ.
ಇದರಿಂದ ಪ್ರಾಣ, ಮಾನ ಉಳಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ತಾಲಿಬಾನಿಗಳು ಅತ್ಯಂತ ಸುಲಭವಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದೆ. ಈ ಮೂಲಕ ಅಫ್ಘಾನ್ ಆಡಳಿತ ಉಗ್ರರ ಪಾಲಾಗಿದೆ.
ಉಗ್ರರು ದೇಶವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಜನರು ದೇಶ ತೊರೆಯಲು ಆರಂಭಿಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದು ವಿಮಾನಕ್ಕೆ ಹತ್ತಲು ನೂರಾರು ಜನ ಮುಗಿಬಿದ್ದಿದ್ದಾರೆ.









