ಅಫ್ಗಾನ್ ನಲ್ಲಿ ತಾಲಿಬಾನ್ ಆಡಳಿತ – ರಷ್ಯಾ ಕಾಶ್ಮೀರದಲ್ಲಿ ಭಯೋತ್ಪದನೆ ವ್ಯಾಪಿಸುವ ಆತಂಕ – ರಷ್ಯಾ
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಇನ್ನೂ ತಾಲಿಬಾನ್ ಅಫ್ಗಾನ್ ನಲ್ಲಿ ಸರ್ಕಾರ ರಚನೆಯ ಕಾರ್ಯದಲ್ಲಿ ತೊಡಗಿದೆ. ಸರ್ಕಾರ ರಚನೆ ಸಮಾರಂಭದಲ್ಲಿ ಉಗ್ರರ ತಾಯ್ನಾಡು ಪಾಕಿಸ್ತಾನ , ಚೈನಾವನ್ನೂ ಆಹ್ವಾನಿಸಿದೆ. ಈ ನಡುವೆ ಅಫ್ಗಾನ್ ನಲ್ಲಿ ಭಯೋತ್ಪದನೆಯೂ ಹೆಚ್ಚಾಗಿದ್ದು, ಇದು ಕಾಶ್ಮೀರದಲ್ಲೂ ಹರಡುವ ಭೀತಿಯಿರೋದಾಗಿ ರಷ್ಯಾ ರಾಯಭಾರಿ ನಿಕೋಲಯ್ ಕುಷೇವ್ ಹೇಳಿದ್ದಾರೆ. ಅಲ್ಲಿ ನಾಗರಿಕ ಯುದ್ಧ ಭುಗಿಲೆದ್ದರೆ, ಅದರ ಪರಿಣಾಮವಾಗಿ ಭಯೋತ್ಪಾದನೆ ಇಡೀ ಪ್ರದೇಶಕ್ಕೆ ಹಬ್ಬಬಹುದು ಎಂದು ಎಚ್ಚರಿಸಿದ್ದಾರೆ.
ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಚೀನಾ, ಪಾಕಿಸ್ತಾನಕ್ಕೆ ಆಹ್ವಾನ
ಅಫ್ಘಾನಿಸ್ತಾನದ ಭಯೋತ್ಪಾದನೆ ರಶ್ಯದ ಪ್ರವೇಶಗಳಿಂದ ಹಿಡಿದು ಕಾಶ್ಮೀರದವರೆಗೂ ವಿಸ್ತರಿಸುವ ಭೀತಿ ಇದೆ. ಭಯೋತ್ಪಾದನೆ ನಿಗ್ರಹ ಸಹಕಾರ, ಭಾರತ- ರಷ್ಯಾ ನಡುವಿನ ವಿವಿಧ ಹಂತಗಳ ಸಂವಾದದ ಪ್ರಮುಖ ಭಾಗವಾಗಿದ್ದು, ಅಫ್ಘಾನಿಸ್ತಾನದ ಸುಸ್ಥಿರ ಅಭಿವೃದ್ಧಿ ಮತ್ತು ಸ್ಥಿರತೆ ದೃಷ್ಟಿಯಿಂದ ಅಫ್ಘಾನಿಸ್ತಾನದಲ್ಲಿ ಎಲ್ಲ ಬಣಗಳನ್ನು ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ರಷ್ಯದ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ನಿಕೋಲಸ್ ಸಲಹೆ ನೀಡಿದ್ದಾರೆ. ಇನ್ನೂ ಅಫ್ಘಾನಿಸ್ತಾನದಿಂದ ಎದುರಾಗಬಹುದಾದದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಭಾರತದ ಜತೆ ರಷ್ಯಾ ನಿಕಟವಾಗಿ ಕಾರ್ಯ ನಿರ್ವಹಿಸಲಿದೆ ಎಂದೂ ಕೂಡ ಭರವಸೆ ನೀಡಿದ್ದಾರೆ.








