ತಾಲೀಬಾನಿಗಳ ವಿಕೃತಿ – ಬಿಗಿಯಾಗಿ ಬುರ್ಖಾ ಧರಿಸಿದ್ದಕ್ಕೆ ಯುವತಿಯನ್ನ ಗುಂಡಿಕ್ಕಿ ಕೊಂದ ಪಾಪಿಗಳು
ಕಾಬೂಲ್: ಅಪ್ಘಾನ್ ನಲ್ಲಿ ಅದ್ಯಾವಾಗ ಅಮೆರಿಕಾ ತನ್ನ ಸೇನೆ ಹಿಂದಕ್ಕೆ ಕರೆಸಿಕೊಳ್ಲಲಾರಂಭಿಸಿತೋ ಬಾಲ ಮುದುರಿಕೊಂಡಿದ್ದ ತಾಲಿಬಾನಿಗಳು ತಮ್ಮ ಅಟ್ಟಹಾಸ ಶುರುಮಾಡಿಬಿಟ್ಟರು.. ಇಲ್ಲಿಯವರೆಗೂ ಲೆಕ್ಕಕ್ಕೆ ಸಿಗದಷ್ಟು ಅಮಾಯಕರ ಜೀವ ಪಡೆಯುತ್ತಾ ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳು ಧರ್ಮದ ಹೆಸರಲ್ಲಿ ಮಾರಣ ಹೋಮ ನಡೆಸುತ್ತಿದ್ದಾರೆ.. ಇಂತಹ ಆಗುಂತಕರಿಗೆ ಪಾಪಿ ರಾಷ್ಟ್ರ ಪಾಕಿಸ್ತಾ, ಕಪಟಿ ದೇಶ ಪಾಕಿಸ್ತಾನದ ಡ್ಯಾಡಿ ಚೀನಾದ ಸಪೋರ್ಟ್ ಬೇರೆ..
ಪತಿ ಜೈಲಲ್ಲಿ.. ಶಿಲ್ಪಾ ಶೆಟ್ಟಿ ಬಂಧನದ ಭೀತಿಯಲ್ಲಿ … ವಂಚನೆ ಕೇಸ್ ನಲ್ಲಿ ನಟಿ , ತಾಯಿ ವಿರುದ್ಧ ಕೇಸ್ ದಾಖಲು..!
ಇತ್ತೀಚೆಗೆ ಖ್ಯಾತ ಹಾಸ್ಯ ಕಲಾವಿದ ಕೇವಲ ಜನರನ್ನ ನಗಿಸುತ್ತಿದ್ದರು ಅನ್ನೋ ಒಂದೇ ಕಾರಣಕ್ಕೆ ಜನರನ್ನ ನಗಿಸೋದೆ ಇಸ್ಲಾಂ ಧರ್ಮದಲ್ಲಿ ಅಪರಾಧ ಎಂದು ಕ್ರೂರವಾಗಿ ಕೊಲೆ ಮಾಡಿದ್ದರು.. ಈ ವಿಡಿಯೋ ವೈರಲ್ ಆಗಿತ್ತು.. ಇದೀಗ ಈ ಪಾಪಿಗಳು 21 ವರ್ಷದ ಯುವತಿ ಬಿಗಿಯಾಗಿ ಬುರ್ಖಾ ಧರಿಸಿದ್ದಳೆಂದು ಆಕೆಗೆ ಗುಂಡಿಟ್ಟು ಕೊಲೆ ಮಾಡಿದ್ದಾರೆ.. ಬಿಗಿ ಉಡುಪು ಧರಿಸಿದ್ದು, ಜೊತೆಗೆ ಪುರುಷ ಸಂಬಂಧಿ ಇಲ್ಲದ ಕಾರಣಕ್ಕೆ ಯುವತಿಯೊಬ್ಬಳನ್ನು ತಾಲಿಬಾನ್ ಕಿಡಿಗೇಡಿಗಳು ಗುಂಡಿಕ್ಕಿ ಕೊಂದು ಹಾಕಿದ ಘಟನೆ ಅಫ್ಘಾನಿಸ್ಥಾನದ ಉತ್ತರ ಬಲ್ಖ್ ಪ್ರಾಂತ್ಯದಲ್ಲಿ ನಡೆದಿದೆ.
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ ಎಂದ ಅಜಯ್ ರಾವ್..!
ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಫ್ಘಾನಿಸ್ಥಾನದ ರೇಡಿಯೊ ಆಜಾದಿ ವರದಿ ಮಾಡಿದೆ. ಕೊಲೆಯಾದ ಯುವತಿಯನ್ನು 21 ವರ್ಷದ ನಜನಿನ್ ಎಂದು ಗುರುತಿಸಲಾಗಿದೆ. ಈಕೆ ಮನೆಯಿಂದ ಮಜರ್ ಎ ಶರೀಫ್ ಪಟ್ಟಣಕ್ಕೆ ಹೋಗಲೆಂದು ವಾಹನ ಹತ್ತುತ್ತಿದ್ದಾಗ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ವೇಳೆ ಆಕೆ ಬುರ್ಖಾ ದರಿಸಿದ್ದಳು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ತಾವು ಈ ದಾಳಿ ನಡೆಸಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ. ತಾಲಿಬಾನ್ ನಿಯಂತ್ರಣಕ್ಕೆ ಪಡೆದ ಬಳಿಕ ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಇದರ ಮಧ್ಯೆ ಕೆಲಸಕ್ಕಾಗಿ ಹೊರಟ ಮಹಿಳೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.