“ಜನರನ್ನು ನಗಿಸುತ್ತೀಯ” ಎಂದು ಖ್ಯಾತ ಹಾಸ್ಯನಟನನ್ನೇ ಕೊಂದ ತಾಲಿಬಾನ್ ಉಗ್ರರು..! – VIDEO
ಅಫ್ಘಾನಿಸ್ಥಾನದಲ್ಲಿನ ತನ್ನ ಸೇನೆಯನ್ನ ಅಮೆರಿಕಾ ವಾಪಸ್ ಕರೆಸಿಕೊಂಡ ನಂತರ ಹಿಂಸಾಚಾರ ಭುಗಿಲೆದ್ದಿದೆ.. ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಿನ ಶೇ 70 ರಷ್ಟು ಪ್ರದೇಶವನ್ನು ತಮ್ಮ ಈಗಾಗಲೇ ಹಿಡಿತಕ್ಕೆ ತೆಗೆದುಕೊಂಡಿದ್ದು, ಈ ಹಿಂಸಾಚಾರಕ್ಕೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲ ನೀಡ್ತಿದೆ..
ಇತ್ತೀಚೆಗೆ ಭಾರತದ ಫೋಟೋ ಜರರ್ನಲಿಸ್ಟ್ ಕೊಲೆ ಮಾಡಿದ್ದ ತಾಲೀಬಾನಿಗಳು ಈಗ ಖ್ಯಾತ ಹಾಸ್ಯನಟನನ್ನೇ ಕೊಂದಿದ್ದಾರೆ.. ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯನಟ ಎಂದು ಹೆಸರು ಮಾಡಿದ್ದ ಖಾಶಾ ಜ್ವಾನ್, ಅವರನ್ನು ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾರೆ, ಜನರನ್ನ ನಗಿಸುವ ಕೆಲಸ ಮಾಡ್ತಿದ್ದಾರೆ ಎಂದು ಗುಂಡಿಕ್ಕಿ ಕೊಂದಿದ್ದಾರೆ.
ಕಂದಹಾರ್ ಪ್ರದೇಶದ ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋಗುವಾಗ ಕಾಶನ್ ಅವರನ್ನು ತಾಲಿಬಾನಿಗಳು ಮೊದಲು ಅಪಹರಿಸಿ, ಕಾರ್ ಒಂದರಲ್ಲಿ ಕೂರಿಸಿಕೊಂಡು ‘ಇಸ್ಲಾಂನಲ್ಲಿ ಹುಟ್ಟಿ ನೀನು ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ‘ ಎಂದು ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಕಾರ್ ನಿಂದ ಹೊರಗೆಳೆದು ಗುಂಡಿಕ್ಕಿ ಕೊಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/i/status/1419944683086692354
ಈ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದ್ದು, ತಾಲಿಬಾನಿಗಳ ಮೇಲೆ ಕಾಶನ್ ಮನೆಯವರು ಆರೋಪ ಹೊರಿಸಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪವನ್ನು ತಾಲಿಬಾನಿಗಳು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್ – ಬೆಚ್ಚಿಬಿದ್ದ ಅಧಿಕಾರಿಗಳು







