“ತಾಲೀಬಾನ್ ನಲ್ಲಿರುವವರು ‘ಉಗ್ರರೇ ಅಲ್ಲ’ ಸಾಮಾನ್ಯ ನಾಗರೀಕರು” – ಉಗ್ರರ ಪೋಷಕ ಇಮ್ರಾನ್ ಖಾನ್ ಹೇಳಿಕೆ
ಪಾಕಿಸ್ತಾನ : ಉಗ್ರರನ್ನ ಪೋಷಿಸಿ , ಬೆಳೆಸಿ , ಅವರ ಕೊಬ್ಬನ್ನ ಹೆಚ್ಚಿಸುತ್ತಾ ದೇಶವನ್ನ ಬಿಕಾರಿ ಮಾಡುತ್ತಾ ಚೀನಾದ ಗುಲಾಮಗಿರಿಯಲ್ಲಿ ಬದುಕುತ್ತಿರುವ ಪಾಕಿಸ್ತಾನ ಪ್ರಧಾನಿ ಮಾನ್ಯ ಇಮ್ರಾನ್ ಖಾನ್ ಅವರು ಇದೀಗ ತಾಲಲೀಬಾನ್ ಉಗ್ರರ ಪರ ನಮ್ಮ ಅನುಕಂಪ ವ್ಯಕ್ತಪಡಿಸಿದ್ದಾರೆ. ಹೌದು.. ತಾಲಿಬಾನ್ ನಲ್ಲಿರುವವರು ಉಗ್ರ ಸಂಘಟನೆಗೆ ಸೇರಿದವರಲ್ಲ, ಅಲ್ಲಿರುವವರು ಸಾಮಾನ್ಯ ನಾಗರೀಕರು ಎಂದು ಹೇಳಿದ್ದಾರೆ ಉಗ್ರರ ಪೋಷಕ ಇಮ್ರಾನ್ ಖಾನ್.
ಇನ್ನೂ ಅಫ್ಘಾನಿಸ್ತಾನದಲ್ಲಿನ ತನ್ನ ಸೇನೆಯನ್ನ ಅಮೇರಿಕಾ ವಾಪಸ್ ಕರೆಸಿಕೊಂಡ ಬೆನ್ನಲ್ಲೇ ತಾಲೀಬಾನ್ ಉಗ್ರರು ಅಫ್ಗಾನ್ ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಬಹುತೇಕ ಪ್ರದೇಶಗಗಳಲ್ಲಿ ಹಿಡಿತ ಸಾಧಿಸಿದೆ.. ಹೀ ನಡುವೆ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಆರೋಪವಿದೆ. ಆದ್ರೆ ಇದಕ್ಕೆ ಅಚಚ್ಚರಿಯಾದ ಹೇಳಿಕೆ ಕೊಟ್ಟಿರುವ ಇಮ್ರಾನ್ ಖಾನ್ , ತಾಲಿಬಾನ್ ಎಂದು ಗುರುತಿಸಲಾಗಿರುವವರಲ್ಲಿ ಹೆಚ್ಚಿನವರು ಜನಸಾಮಾನ್ಯರು. ಗಡಿಯಲ್ಲಿ 3 ಮಿಲಿಯನ್ ಆಫ್ಘನ್ ನಿರಾಶ್ರಿತರಿದ್ದಾರೆ. ಅವರನ್ನು ಹೇಗೆ ಕೊಲ್ಲೋಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನವು 30 ಲಕ್ಷ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಅದರಲ್ಲಿ ಹೆಚ್ಚಿನವರು ಪಶ್ತೂನ್ ಹಾಗೂ ತಾಲಿಬಾನ್ ಹೋರಾಟಗಾರರ ಜನಾಂಗದವರೇ ಆಗಿದ್ದಾರೆ. ಸದ್ಯ 5 ಲಕ್ಷ ಶಿಬಿರಗಳಿದ್ದು, ಅವುಗಳಲ್ಲಿ ಕೆಲವು ಉಗ್ರ ಸಂಘಟನೆಗೆ ಸೇರಿದವರಾಗಿಲ್ಲ. ಜನಸಾಮಾನ್ಯರೂ ಇದ್ದಾರೆ. ಅವರನ್ನು ನಾವು ಹೇಗೆ ಹತ್ಯೆಗೈಯ್ಯುವುದಕ್ಕೆ ಸಾಧ್ಯ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪಾಕಿಸ್ತಾನದಲ್ಲಿನ ತಾಲಿಬಾನ್ ಸುರಕ್ಷಿತ ತಾಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸುರಕ್ಷಿತ ತಾಣಗಳು ಎಲ್ಲಿವೆ. ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ, ಅವರು ತಾಲಿಬಾನ್ ನಂತೆಯೇ ಒಂದೇ ಜನಾಂಗದವರಾಗಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್ ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ, ಆದರೆ, ಇಮ್ರಾನ್ ಖಾನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೊಂದು ಅನ್ಯಾಯದ ಆರೋಪ ಎಂದು ತಿಳಿಸಿದ್ದಾರೆ.








