ಪಂಜಶೀರ್ ನಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದ ತಾಲಿಬಾನ್ – ರಸ್ತೆಗಳು ಬ್ಲಾಕ್
ಇಡೀ ಅಫ್ಗಾನಿಸ್ತಾನವನ್ನೇ ವಶಕ್ಕೆ ಮಕ್ಕಳು ಮಹಿಳೆಯರ ಜೀವನ ನರಕ ಮಾಡಿ ಸಿಕ್ಕಸಿಕ್ಕವರನ್ನ ಕೊಂದು ಹೆಣಗಳ ರಾಶಿ ಮೇಲೆ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್ ನರರಾಕ್ಷಸರು ಒಂದೇ ಒಂದು ಪ್ರದೇಶದ ಜನರನ್ನ ಕಂಡ್ರೆ ಕನಸಲ್ಲಿಯೂ ಬೆಚ್ಚಿ ಬೀಳ್ತಾರೆ. 33 ಪ್ರಾಂತ್ಯಗಳನ್ನ ವಶಪಡಿಸಿಕೊಂಡಿರುವ ತಾಲಿಬಾನಿಗಳ ಕೈಲಿ ಅದೊಂದು ಪ್ರದೇಶವನ್ನ ಟಚ್ ಮಾಡೋದಕ್ಕೂ ಆಗದಂತಾಗಿದೆ. ಇನ್ನೂ ಆ ಪ್ರದೇಶದ ಜನರ ತಂಟೆಗೆ ಹೋದ ಪರಿಣಾಮ 300 ತಾಲಿಬಾನಿ ಉಗ್ರರ ಕಥೆ ಮುಗಿದಿದೆ.
ಪಂಜಶೀರ್ ದ ಹುಲಿ ಎಂದು ಕರೆಸಿಕೊಳ್ಳುವ ಅಹಮದ್ ಶಾ ಮಸೂದ್ ಪುತ್ರ 32 ವರ್ಷದ ಅಹಮದ್ ಶಾ, ನಮ್ಮ ಪ್ರಾಂತ್ಯವನ್ನು ತಾಲಿಬಾನಿಗಳಿಗೆ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ. ಆದ್ರೂ ತಾಲಿಬಾನಿಗಳು ಪಂಜಶೀರ್ ಅನ್ನ ವಶಪಡಿಸಿಕೊಳ್ಳಲು ನಾನಾ ಕಸರತ್ತುಗಳನ್ನ ನಡೆಸ್ತಾಯಿದ್ದಾರೆ.. ಆದ್ರೆ ಅಲ್ಲಿನ ಜನ ಮಾತ್ರ ಪ್ರಾಣ ಹೋದ್ರೂ ತಾಲಿಬಾನಿಗಳ ವಿರುದ್ಧ ಹೋರಾಟ ಮಾಡ್ತೇವೋ ಹೊರತು ಶರಣಾಗಲ್ಲ ಎಂದು ಹೋರಾಟಕ್ಕೆ ಸಜ್ಜಾಗಿ ನಿಂತಿದ್ದಾರೆ.. 
ಇದೀಗ ತಾಲಿಬಾನಿಗಳು ಪಂಜಶೀರ್ ಪ್ರಾಂತ್ಯದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದ್ದು, ಸುತ್ತಮುತ್ತಲಿನ ಎಲ್ಲಾ ರೋಡ್ ಗಳನ್ನ ಪ್ರಮುಖವಾಗಿ ಕಣಿವಿಗೆ ಸಂಪೆರ್ಕಿಸುವ ರಸ್ತೆಗಳನ್ನ ಬಂದ್ ಮಾಡಿರೋದಾಗಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 2 ದಿನಗಳಿಂದ ಇಂಟರ್ ನೆಟ್ ಸೇವೆ ಸ್ಥಗಿತಗೊಂಡ ಪರಿಣಾಮ , ಅಲ್ಲಿನ ಜನರು ಗಂಭೀರ ಸವಾಲುಗಳನ್ನ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಆಹಾರ ಬೆಲೆಗಳು ಹೆಚ್ಚಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ ಪಂಜಶೀರ್ ಕಣಿವೆಯು ಕಾಬೂಲ್ ನಿಂದ ಉತ್ತರಕ್ಕೆ ಸುಮಾರು 90 ಮೈಲುಗಳ ಉತ್ತರದಲ್ಲಿರುವ ಹಿಂದೂ ಕುಶ್ ಪರ್ವತಗಳಲ್ಲಿದೆ. ‘ಉಸ್ತುವಾರಿ’ ಅಧ್ಯಕ್ಷ ಅಮರುಲ್ಲಾ ಸಲೇಹ್ ಮತ್ತು ಪ್ರಖ್ಯಾತ ತಾಲಿಬಾನ್ ವಿರೋಧಿ ರಾಜಕಾರಣಿ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಅವರ ನೇತೃತ್ವದಲ್ಲಿ ಅಲ್ಲಿನ ಜನರು ತಾಲಿಬಾನಿಗಳ ವಿರುದ್ಧ ಧೈರ್ಯವಾಗಿ ನಿಂತಿದ್ದಾರೆ.
ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಸಾಕಷ್ಟು ಸಕ್ರಿಯವಾಗಿದೆ. ತಾಲಿಬಾನಿಗಳೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆ, NRF ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದು, ಅಫ್ಘಾನ್ ಯುವಕರು ದಂಗೆಕೋರರೊಂದಿಗೆ ಹೋರಾಡಲು ಕಠಿಣ ತರಬೇತಿ ಪಡೆಯುತ್ತಿದ್ದಾರೆ ಎಂದು ಕೂಡ ತಿಳಿಸಿತ್ತು.
ಸೆಪ್ಟೆಂಬರ್ 1 ರಂದು ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಒಂದು ವಿಶೇಷ ವರದಿಯಲ್ಲಿ ತಾಲಿಬಾನ್ ಪಂಜಶೀರ್ ನ ಕೆಳ ಶ್ರೇಣಿಗಳನ್ನು ತಲುಪಿದೆ ಎಂದು ಖಚಿತ ಪಡಿಸಿತ್ತು. ಪ್ರಸ್ತುತ, ಪ್ರತಿರೋಧ ಪಡೆಗಳು ಮತ್ತು ತಾಲಿಬಾನ್ ಭಯೋತ್ಪಾದಕರ ನಡುವೆ ನಿರಂತರ ಯುದ್ಧ ನಡೆಯುತ್ತಿದೆ. ತಾಲಿಬಾನ್ ಶಿಬಿರದಲ್ಲಿ ಅನೇಕ ಸಾವುಗಳು ಕೂಡ ಸಂಭವಿಸಿದೆ.
ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ನಿಧನ..!









