ಭಾರತದ ಜೊತೆ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ ತಾಲಿಬಾನ್
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಅಫ್ಗಾನ್ ನಿಂದ ನಾಗರಿಕರ ಸ್ಥಳಾಂತರದಲ್ಲಿ ತೊಡಗಿವೆ.
ಇನ್ನೂ ಪಾಕಿಸ್ತಾನ ಚೈನಾ ತಾಲಿಬಾನಿಗಳಿಗೆ ಬೆಂಬಲಿಸಿದ್ದು, ಭಾರತದ ವಿರುದ್ಧ ಮುಗಿಬೀಳುವ ತಂತ್ರ ಹೊಂದಿರುವುದಾಗಿ ತಿಳಿದುಬಂದಿತ್ತು. ಸಾಲದಕ್ಕೆ ಪಾಕ್ ಕಾಶ್ಮೀರವನ್ನ ತಾಲಿಬಾನಿಗಳ ಸಹಾಯದಿಂದ ಕಿತ್ತುಕೊಳ್ಳಲಿದೆ ಎಂದು ಲೈವ್ ಡಿಬೇಟ್ ನಲ್ಲಿ ಪಾಕ್ ಆಡಳಿತ ಪಕ್ಷದ ಮುಖಂಡೆ ಬಾಯಿ ಬಡೆದುಕೊಂಡಿದ್ದರು..
ಭಾರತಕ್ಕೆ ತಾಲಿಬಾನಿಗಳಿಂದ ಕೆಡುಕಾಗುವ ಅನುಮಾನವಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ನ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ಜಾಯ್ , ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಕರೆ ನೀಡಿದ್ದಾರೆ. ಕಾಬೂಲ್ ಪತನದ ನಂತರ ಭಾಷಣದಲ್ಲಿ ತಾಲಿಬಾನ್ ನಾಯಕ ಮೊದಲ ಬಾರಿಗೆ ಮಾತನಾಡಿ ಭಾರತದ ಬಗ್ಗೆಯೂ ಪ್ರಸ್ತಾಪಿಸಿದ್ದಲ್ಲದೇ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.








