ಮಡಿಕೇರಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ವಾಗ್ಯುದ್ಧ ಮುಂದುವರಿದಿದೆ. ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು ಎಂದು ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯರ ಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು. ಆ ಮೂಲಕ ರಾಜ್ಯವನ್ನು ಕಾಡು ಪ್ರಾಣಿಗಳಿಂದ ರಕ್ಷಿಸಬೇಕಾಗಿದೆ.
ನಾವು ಯಾರಿಗೂ ಹುಲಿ ಅನ್ನೋ ಬಿರುದು ಕೊಟ್ಟಿಲ್ಲ. ಆದರೆ ಕೆಲವರು ಅವರೇ ಸ್ವಯಂ ಘೋಷಿತ ಹುಲಿಗಳಾಗಿದ್ದಾರೆ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ : ಯತ್ನಾಳ್ ಗೆ ಇರುವ ಗಟ್ಸ್ ಬಿಜೆಪಿಗರಿಗಿಲ್ಲ, ಅವರೇ ಸಿಎಂ ಆಗ್ಬಹುದು : ಹೊರಟ್ಟಿ
ಮುಂದುವರಿದು ಡಿ.ಜೆ ಹಳ್ಳಿ ಪ್ರಕರಣ ಪ್ರಸ್ತಾಪಿಸಿ ಸಿದ್ದು ವಿರುದ್ಧ ಕಿಡಿಕಾರಿದ ಕಟೀಲ್, ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿಯೇ ನೇರ ಹೊಣೆ.
ಬಂಡೆ ದೊಡ್ಡದ ಅಥವಾ ಹುಲಿ ದೊಡ್ಡದಾ ಎನ್ನೋ ಗುದ್ದಾಟ ಕಾಂಗ್ರೆಸ್ ನಲ್ಲಿ ಶುರುವಾಗಿದೆ. ಈ ಗುದ್ದಾಟದ ಭಾಗವಾಗಿ ಅವರದ್ದೇ ಶಾಸಕರ ಮನೆಗೆ ಬೆಂಕಿ ಹಾಕಲಾಗಿದೆ.
ಮಾಜಿ ಮೇಯರ್ ಸಂಪತ್ ರಾಜ್ ಡಿಕೆಶಿ ಹಿಂದೆ ಬಂದವರು. ಅಖಂಡ ಶ್ರೀನಿವಾಸಮೂರ್ತಿ ಅವರು ಸಿದ್ದರಾಮಯ್ಯ ಅವರ ಹಿಂದೆ ಬಂದವರು. ಇವರ ಜಗಳದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬಿದ್ದಿತ್ತು.
ಇದನ್ನೂ ಓದಿ : ಕೊರೊನಾ ಲಸಿಕೆ ಉಚಿತ ನೀಡುವ ಪ್ರಣಾಳಿಕೆ : ಇದ್ರಲ್ಲಿ ತಪ್ಪಿಲ್ಲ ಎಂದ ಕರಂದ್ಲಾಜೆ
ಹೀಗಾಗಿ ಶ್ರೀನಿವಾಸ್ ಮೂರ್ತಿ ಸಂಪತ್ ರಾಜ್ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸ್ ತನಿಖೆ ಡಿಕೆಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಜಗಳವೇ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಾಟೆಗೆ ಕಾರಣ ಎನ್ನೋದನ್ನು ಬಯಲುಗೊಳಿಸಿದೆ ಎಂದು ಕಟೀಲ್ ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel