ವಾಹನ ಚಾಲನೆ ಮಾಡುವಾಗ ಫೋನ್ನಲ್ಲಿ ಮಾತನಾಡುವುದು ಅಪರಾಧವಲ್ಲ: ನಿತಿನ್ ಗಡ್ಕರಿ Saaksha Tv
ನವದೆಹಲಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಬುಧವಾರ ಅಧಿವೇಶನದಲ್ಲಿ ಮಾತನಾಡಿದ ಅವರು ಕಾರು ಚಾಲನೆ ಮಾಡುವಾಗ ಹ್ಯಾಂಡ್ ಫ್ರೀ ಡಿವೈಸ್ ಅಂದ್ರೆ ಬ್ಲೂಟೂತ್, ಇಯರ್ಫೋನ್ ಮೂಲಕ ಫೋನ್ನಲ್ಲಿ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಆದರೆ ಆಗ ಚಾಲಕ ಫೋನನ್ನು ಕಾರಿನಲ್ಲಿಡದೇ ಜೇಬಲ್ಲಿ ಇಟ್ಟುಕೊಂಡಿರಬೇಕು. ಇದಕ್ಕೆ ಪೊಲೀಸರು ದಂಡ ವಿಧಿಸಬಾರದು. ಒಂದು ವೇಳೆ ಯಾರಾದರೂ ದಂಡ ವಿಧಿಸಿದ್ರೆ ಇದನ್ನು ಕೋರ್ಟ್ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕೆಲವೇ ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಈ ಹಿಂದೆ ಡ್ರೈವಿಂಗ್ ವೇಳೆ ಫೋನ್ನಲ್ಲಿ ಮಾತನಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಈ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದ್ದು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.