ರೌಡಿ ಬೇಬಿ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಇದೀಗ ವೆಬ್ ಸೀರೀಸ್ ಗೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಹಲವಾರು ಪ್ರಾಜೆಕ್ಟ್ ಗಳಲ್ಲಿ ಸಿಕ್ಕಾಪಟೆ ಬ್ಯುಸಿಯಿರುವ ಸಾಯಿ ಪಲ್ಲವಿ ತಮಿಳಿನ ವೆಬ್ ಸೀರೀಸ್ ಮೂಲಕ ಡಿಜಿಟಲ್ ಮೀಡಿಯಾಗೆ ಲಗ್ಗೆ ಇಡಲು ಮುಂದಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಚಿತ್ರೀಕರಣ ಚಿತ್ರಮಂದಿರಗಳು ಎಲ್ಲಾ ಸ್ಥಗಿತವಾಗ್ತಿದ್ದು, ಹೆಚ್ಚಿನ ಸೂಪರ್ ಸ್ಟಾರ್ ಗಳೆಲ್ಲ ವೆಬ್ ಸೀರಿಸ್ ನತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇದೀಗ ಆ ಸಾಲಿಗೆ ಸೇರಲಿರುವ ರೌಡಿ ಬೇಬಿ ಸಾಯಿ ಪಲ್ಲವಿ ಡಿಜಿಟಲ್ ಮೀಡಿಯಾದಲ್ಲಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಇನ್ನೂ ಬಹುಭಾಷಾ ನಟ ಪ್ರಕಾಶ್ ರೈ ಅವರ ಜೊತೆಗೆ ಸಾಯಿ ಪಲ್ಲವಿ ತೆರೆಹಂಚಿಕೊಳ್ಲಲಿದ್ದಾರಂತೆ. ಸಾಯಿ ಪಲ್ಲವಿ ಹಾಗೂ ಪ್ರಕಾಶ್ ರೈ ತಂದೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್ ಸರಣಿಗೆ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವೆಬ್ ಸೀರಿಸ್ ಗೆ ನೆಟ್ ಫ್ಲಿಕ್ಸ್ ಇಂಡಿಯಾ ಬಂಡವಾಳ ಹೂಡುತ್ತಿದೆ. ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರುವ ತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆಯಂತೆ. ಕೊರೊನಾ ಲಾಕ್ ಡೌನ್ ನಿಂದ ವೆಬ್ ಸೀರಿಸ್ ಬಗ್ಗೆ ಯಾವದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೀಗ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಹಿನ್ನಲೆ ವೆಬ್ ಸರಣಿ ಬಗ್ಗೆ ರಿವೀಲ್ ಆಗಿದೆ. ಇನ್ನೇನು ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ. ಅಂದ್ಹಾಗೆ ಸಾಯಿ ಪಲ್ಲವಿ ಬಳಿ ಲವ್ ಸ್ಟೋರಿ ಮತ್ತು ವಿರಾಟ ಪರ್ವಂ ಸಿನಿಮಾ ಕೈಯಲ್ಲಿದೆ.
ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ
ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...








