ಮೃತ ನಾಯಿಯ ನೆನಪಿಗಾಗಿ ಮಂದಿರ ನಿರ್ಮಿಸಿದ 82 ವರ್ಷದ ವ್ಯಕ್ತಿ
ತಮಿಳುನಾಡಿನ ಶಿವಗಂಗೆಯ ಮನಮದುರೈ ಮೂಲದ ವ್ಯಕ್ತಿಯೊಬ್ಬರು ತಮ್ಮ ಮೃತ ನಾಯಿಯ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. 82 ವರ್ಷ ವಯಸ್ಸಿನ ನಿವೃತ್ತ ಸರ್ಕಾರಿ ನೌಕರ ಮುತ್ತು ಅವರು ತಮ್ಮ ಜಮೀನಿನಲ್ಲಿ ತನ್ನ ನಾಯಿ ಟಾಮ್ಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ.
ವಯೋವೃದ್ಧರ ಮುದ್ದಿನ ಪ್ರಾಣಿ ಕಳೆದ ವರ್ಷ ಅನಾರೋಗ್ಯದಿಂದ ಇಹಲೋಕ ತ್ಯಜಿಸಿತ್ತು.ಪ್ರೀತಿಯ ನಾಯಿಯನ್ನ ಕಳೆದುಕೊಂಡಿ ದುಖಿಃತರಾಗಿದ್ದ ಮುತ್ತು ಅವರು ತನ್ನ ತೋಟದಲ್ಲಿ ಟಾಮ್ನ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜೆ ಸಲ್ಲಿಸುತ್ತಾರೆ. ಮನುಷ್ಯ ಮತ್ತು ಅವನ ಮುದ್ದಿನ ಪ್ರಾಣಿಗಳ ನಡುವಿನ ಬಾಂಧವ್ಯವನ್ನು ತನ್ನ ಮುಂದಿನ ಪೀಳಿಗೆಗೆ ಕಲಿಸುವ ಮಾರ್ಗವಾಗಿದೆ ಎಂದು ಮುತ್ತು ಅವರು ಹೇಳಿದ್ದಾರೆ.
“ನಾನು 2010 ರಿಂದ ಈ ನಾಯಿಯೊಂದಿಗೆ ಇದ್ದೇನೆ. ನನ್ನ ಮಗುವಿಗಿಂತಲೂ ಹೆಚ್ಚು ಪ್ರೀತಿಯನ್ನು ಹೊಂದಿದ್ದೆ. ದುರದೃಷ್ಟವಶಾತ್, ಟಾಮ್ 2021 ರಲ್ಲಿ ಬಿಟ್ಟು ಹೋದ. ಹಾಗಾಗಿ ಆತನಿಗೆ ವಿಗ್ರಹ ಮಾಡುತ್ತಿದ್ದೇವೆ” ಎಂದು ಹೇಳಿದರು.
“ಕಳೆದ ಮೂರು ತಲೆಮಾರುಗಳಿಂದ ನನ್ನ ಕುಟುಂಬದಲ್ಲಿ ನಾಯಿ ಇಲ್ಲದೆ ಯಾರೂ ಇರಲಿಲ್ಲ. ನನ್ನ ಅಜ್ಜಿ ಮತ್ತು ನನ್ನ ತಂದೆ ನಾಯಿ ಪ್ರೇಮಿಗಳು. ಅದು ಪ್ರಾಣಿ ಎಂದು ನಾನು ಯಾವತ್ತು ನೋಡಿಲ್ಲ. ನನ್ನ ಸ್ವಂತ ಮಗನಂತೆ ಸಾಕಿದೆ ಎನ್ನುತ್ತಾರೆ ಅಜ್ಜ. ಮುತ್ತು ಅವರ ಕಾರ್ಯವು ಗ್ರಾಮಸ್ಥರು ಮತ್ತು ವಾಹನ ಸವಾರರಿಂದ ಪ್ರಶಂಸೆಗೆ ಪಾತ್ರವಾಗಿದೆ,
“ನನ್ನ ತಂದೆ ಹತ್ತು ವರ್ಷಗಳಿಂದ ಈ ನಾಯಿಯನ್ನು ಸಾಕಿದ್ದರು. ಇದ್ದಕ್ಕಿದ್ದಂತೆ, ನಾಯಿಯು ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿತು ಜನವರಿ 2021 ರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿತು ಎಂದು ಮುತ್ತು ಅವರ ಮಗ ಹೇಳುತ್ತಾರೆ.