ತಮಿಳುನಾಡಿನಲ್ಲಿ ಏಪ್ರಿಲ್ 30 ರವರೆಗೆ ಭಾಗಶಃ ಲಾಕ್‌ಡೌನ್ !
ಚೆನ್ನೈ: ಶೀಘ್ರವಾಗಿ ಏರಿಕೆಯಾಗುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ತಮಿಳುನಾಡು ಸರ್ಕಾರ ಬುಧವಾರ ಭಾಗಶಃ ಲಾಕ್‌ಡೌನ್ ಅಡಿಯಲ್ಲಿ ತನ್ನ ನಿರ್ಬಂಧಗಳನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಿದೆ.
ಸುರಕ್ಷತೆ ಮತ್ತು ತಡೆಗಟ್ಟುವ ಕ್ರಮಗಳು – ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಈ ಬಾರಿ ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಅನುಮತಿಸುವ ಪ್ರಯಾಣವನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸಹ ನಿರ್ಬಂಧಿಸಲಾಗಿದೆ.

ಕೇಂದ್ರವು ನಿನ್ನೆ ಸಂಜೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪರಿಸ್ಥಿತಿ ಕೆಟ್ಟ ಸ್ಥಿತಿಗೆ ತಿರುಗುತ್ತಿದೆ ಎಂದು ಹೇಳಿದೆ. ಇದು ಆರೋಗ್ಯ ಸಚಿವಾಲಯದ ಆತಂಕಕ್ಕೆ ಒಂದು ದೊಡ್ಡ ಕಾರಣವಾಗಿದೆ.
ಇಡೀ ದೇಶವು ಅಪಾಯದಲ್ಲಿದೆ ಮತ್ತು ಈ ಹಂತದಲ್ಲಿನ ನಿರ್ಲಕ್ಷ್ಯಕ್ಕೆ ಭಾರೀ ವೆಚ್ಚವನ್ನು ತೆರಬೇಕಾದಿತು ಎಂದು ಎಚ್ಚರಿಸಿದೆ.
ಕೊರೋನವೈರಸ್ ಪ್ರಕರಣಗಳ ಏರಿಕೆ ಕಂಡಿರುವ ಭಾರತದ ಎಂಟು ರಾಜ್ಯಗಳಲ್ಲಿ ತಮಿಳುನಾಡು ಕೂಡ ಸೇರಿದೆ. ದೇಶದಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಈ ರಾಜ್ಯಗಳು ಶೇಕಡಾ 84.73 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 2,342 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರೆ, 16 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ 874 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 14,846 ರಷ್ಟಿದೆ.
ಕಳೆದ ವಾರ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಸರಾಸರಿ ಶೇಕಡಾ 23 ರಷ್ಟಿದ್ದರೆ, ನಂತರ ಪಂಜಾಬ್ ಶೇ 8.82, ಛತ್ತೀಸ್‌ಗಡ 8.24, ಮಧ್ಯಪ್ರದೇಶ 7.82, ತಮಿಳುನಾಡು ಶೇ 2.5, ಕರ್ನಾಟಕ ಶೇಕಡಾ 2.45, ಗುಜರಾತ್ ಶೇ 2.22, ಮತ್ತು ದೆಹಲಿ ಶೇ 2.04 ರಷ್ಟಿದೆ.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
https://twitter.com/SaakshaTv/status/1374202262675976196?s=19
https://twitter.com/SaakshaTv/status/1374157555673468934?s=19
ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆಗಳಿಗೆ ಸುರಕ್ಷತಾ ಮಾರ್ಗಸೂಚಿ !#railway #womensafety https://t.co/M9zTo3qbc8
— Saaksha TV (@SaakshaTv) March 22, 2021
https://twitter.com/SaakshaTv/status/1376945914166710276?s=19
#Tamilnadu #partiallockdown








