ಕೊರೊನಾ ಹೆಚ್ಚಳ : ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆ lockdown
ಚೆನ್ನೈ : ತಮಿಳುನಾಡಿನಲ್ಲಿ ಕೊರೊನಾ ಸೋಂಕು ಉಲ್ವಣಗೊಳ್ಳುತ್ತಿರುವ ಕಾರಣ ಅಲ್ಲಿನ ಸರ್ಕಾರ ಮೇ 10ರಿಂದ ಮೇ 24ರವರೆಗೆ ಲಾಕ್ ಡೌನ್ ಹೇರಿದೆ.
ಈ ಕುರಿತು ಆದೇಶ ಹೊರಡಿಸಿ ತಮಿಳುನಾಡು ಮುಖ್ಯಮಂತ್ರಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ.
ಈ ಲಾಕ್ ಡೌನ್ ನಲ್ಲಿ ದಿನಸಿ ಅಂಗಡಿಗಳು, ಟೀ ಶಾಪ್ ಗಳು ಮಧ್ಯಾಹ್ನ 12 ವರೆಗೆ ತೆರಯಬಹುದು.
ಉಳಿದಂತೆ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಕೇವಲ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಉಳಿದಂತೆ ಮಾಲ್, ಬೃಹತ್ ವ್ಯಾಪಾರ ಮಳಿಗೆಗಳ ಮೇಲೆ ನಿಬರ್ಂಧ ಮುಂದುವರಿಯಲಿದೆ.
ಅಂತರಾಷ್ಟ್ರೀಯ ಪ್ರಯಾಣಕ್ಕೆ ನಿಬರ್ಂಧ ಹಾಕಲಾಗಿದೆ.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿಗದಿತ ರೈಲು/ವಿಮಾನಗಳ ಮೂಲಕ ಮಾತ್ರ ಸಂಚರಿಸಬಹುದಾಗಿದೆ.
ಅಗತ್ಯ ಸೇವೆಗಳು ಹೊರತುಪಡಿಸಿ ಇನ್ನುಳಿದ ಎಲ್ಲ ಚಟುವಟಿಕೆಗಳ ಮೇಲೆ ತಮಿಳುನಾಡು ಸರ್ಕಾರ ನಿಬರ್ಂಧ ಹಾಕಿದೆ.









