ತಮಿಳುನಾಡಿನ ನೀರಾವರಿ ಸಚಿವ ದೊರೈ ಮುರುಗನ್ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅವರು ಹಲವು ಪತ್ನಿಯರನ್ನು ಹೊಂದುವ ಸಂಸ್ಕೃತಿಯುಳ್ಳ ಉತ್ತರ ಭಾರತೀಯರು ತಮಿಳಿಗೆ ಅವಮಾನ ಮಾಡಿದರೆ ಅವರು ನಾಲಗೆ ಕತ್ತರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಹೇಳಿಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೇಂದ್ರ ಸರ್ಕಾರದ ವಿರುದ್ಧದ ಕ್ಷೇತ್ರ ಮರುವಿಂಗಡಣೆ ಕುರಿತ ಟೀಕೆಯ ನಂತರ ಬಂದಿದೆ. ಸ್ಟಾಲಿನ್ ಅವರು ಕೇಂದ್ರದ ನಿಲುವನ್ನು ತೀವ್ರವಾಗಿ ಖಂಡಿಸುತ್ತಿದ್ದು, ಇದು ಡಿಎಂಕೆ ಮತ್ತು ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟವನ್ನು ಉಂಟುಮಾಡಿದೆ.
ದೊರೈ ಮುರುಗನ್ ಅವರ ಹೇಳಿಕೆಗೆ ವಿವಿಧ ರಾಜಕೀಯ ನಾಯಕರು ಮತ್ತು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.