Tamilunadu : ಪ್ರಿಯಕರನ ಎದುರಲ್ಲೇ ಯುವತಿಯ ಮೇಲೆ ಐವರು ಕಾಮುಕರಿಂದ ಅತ್ಯಾಚಾರ…..
ಪ್ರಿಯಕರನ ಎದುರಲ್ಲೇ ಯುವತಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಹೇಯ ಘಟನೆ ಕಾಂಚಿಪುರಂನಲ್ಲಿ ನಡೆದಿದೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಾಗೂ ಆಕೆಯ ಬಾಯ್ ಫ್ರೆಂಡ್ ಗೆ ಚಾಕು ತೋರಿಸಿ ಈ ಕೃತ್ಯವೆಸಗಲಾಗಿದೆ. ಎಲ್ಲಾ ಐವರು ಆರೋಪಿಗಳಾದ ಮಣಿಕಂದನ್ (22), ವಿಮಲ್ ಕುಮಾರ್ (25), ಶಿವಕುಮಾರ್ (20), ವಿಘ್ನೇಶ್ (22) ಮತ್ತು ತೆನ್ನರಸು (23) ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಹುಡುಗಿ ಮತ್ತು ಆಕೆಯ ಗೆಳೆಯ 20 ವರ್ಷದ ಹುಡುಗ ಕಾಂಚೀಪುರಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಬಿಬಿಎ ಮತ್ತು ಬಿಕಾಮ್ ಓದುತ್ತಿದ್ದಾರೆ. ಅವರು ಆಗಾಗ್ಗೆ ನಗರದ ಹೊರವಲಯಕ್ಕೆ ಲಾಂಗ್ ಡ್ರೈವ್ ಹೋಗುತ್ತಿದ್ದರು. ಈ ಸ್ಥಳವು ಬೆಂಗಳೂರು-ಪುದುಚೇರಿ ಹೊರವರ್ತುಲ ರಸ್ತೆಯಿಂದ ಎರಡು ಕಿ.ಮೀ ದೂರದಲ್ಲಿರುವ ಕಾರಣ ಬೀದಿ ದೀಪಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಥಳವು ಖಾಸಗಿ ಶಾಲೆ ಮತ್ತು ಖಾಲಿ ರಿಯಲ್ ಎಸ್ಟೇಟ್ ಪ್ಲಾಟ್ ಬಳಿ ಇದೆ.
ಗುರುವಾರ ಸಂಜೆ, ಆರೋಪಿಗಳು ಪ್ಲಾಟ್ ನ ಬಳಿ ಮದ್ಯಪಾನ ಮಾಡುತ್ತಿದ್ದರು.. ಈ ವೇಳೆ ಅಲ್ಲಿ ಓಡಾಡುತ್ತದ್ದ ಹುಡುಗ ಹುಡುಗಿ ಮೇಲೆ ದಾಳಿ ಮಾಡಿದ್ದಾರೆ. ಬಾಯ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿ, ಇನ್ನಿಬ್ಬರು ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 6 ರಿಂದ 7 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹೋದ ನಂತರ, ಯುವಕನು ಹತ್ತಿರದಲ್ಲೇ ವಾಸಿಸುವ ತನ್ನ ಚಿಕ್ಕಪ್ಪನಿಗೆ ಮಾಹಿತಿ ತಿಳಿಸಿದ್ದು , ಅವರು ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿದರು. ಸಂಸತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಂಚಿ ತಾಲೂಕು ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಮತ್ತು ಮಹಿಳಾ ಕಿರುಕುಳ ಕಾಯ್ದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳದಲ್ಲಿ ಬೆಳಕಿಲ್ಲದ ಕಾರಣ ಜೊತೆಗೆ ಆರೋಪಿಗಳು ಮುಸುಕು ಧರಿಸಿದ್ದ ಕಾರಣ ಸಂತ್ರಸ್ತರಿಗೆ ಸ್ಪಷ್ಟವಾಗಿ ಆರೋಪಿಗಳನ್ನ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Tamil Nadu police arrest 5 for gangrape of college student in Kanchipuram








