ಉಕ್ರೇನ್ ಸೈನ್ಯಕ್ಕೆ ಸೇರಿದ ತಮಿಳುನಾಡಿನ ಮೂಲದ ವಿದ್ಯಾರ್ಥಿ – Saaksha Tv
ಉಕ್ರೇನ್ : ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‍ನಲ್ಲಿ ತಮಿಳುನಾಡಿನ 21 ವರ್ಷದ ವಿದ್ಯಾರ್ಥಿ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸಾಯಿನಿಕೇಶ್ ರವಿಚಂದ್ರನ್ 2018ರಲ್ಲಿ ಸೈನಿಕೇಶ್ ಖಾರ್ಕಿವ್‍ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಉಕ್ರೇನ್‍ಗೆ ತೆರಳಿದ್ದರು. ಜುಲೈ 2022ರೊಳಗೆ ಕೋರ್ಸ್ ಪೂರ್ಣಗೊಳಿಸಬೇಕಿತ್ತು.
ಆದರೆ ಈ ನಡುವೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿದ್ದು, ಈ ವೇಳೆ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದರೆ. ಸಾಯಿನಿಕೇಶ್ ಜೊತೆಗೆ ಪೋಷಕರು ಸಂಪರ್ಕ ಕಳೆದುಕೊಂಡಿದ್ದಾರೆ.
ಈ ವಿಷಯವನ್ನು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ ನಂತರ ಸಾಯಿನಿಕೇಶ್ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ನಂತರ ತಾನು ಉಕ್ರೇನ್ ಸೈನ್ಯಕ್ಕೆ ಸೇರಿರುವುದಾಗಿ ತಮ್ಮ ಕುಟುಂಬಸ್ಥರಿಗೆ ತಿಳಿಸಿದರು.
ಇವರು ಎತ್ತರದ ಕಾರಣಕ್ಕಾಗಿ ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕರಿಸಲ್ಪಟ್ಟ ವಿದ್ಯಾರ್ಥಿ. ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಈಗ ಸ್ವಯಂಸೇವಕರನ್ನು ಒಳಗೊಂಡಿರುವ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದ ಭಾಗವಾಗಿ ರಷ್ಯಾ ವಿರುದ್ಧ ಉಕ್ರೇನ್‌ಗಾಗಿ ಹೋರಾಡುತ್ತಿದ್ದಾರೆ ಎಂದು ಕೇಂದ್ರಕ್ಕೆ ಗುಪ್ತಚರ ವರದಿ ತಿಳಿಸಿದೆ.









