ಎಚ್ಚರ ಎಚ್ಚರ ಮತ್ತೆ ಚಂಡಮಾರುತ ಸಾಧ್ಯತೆ ( Cyclone)
ಚೆನ್ನೈ : ಕಳೆದ ವಾರ ನಿವಾರ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದಲ್ಲಿ ಅಬ್ಬರಿಸಿತ್ತು. ನಿವಾರ್ ಹೊಡೆತಕ್ಕೆ ಸಿಲುಕಿದ್ದ ಪ್ರದೇಶಗಳು ಇನ್ನೂ ಚೇತರಿಕೆ ಕಂಡಿಲ್ಲ.
ಆದ್ರೆ ಗಾಯದ ಮೇಲೆ ಬರೆ ಎಳೆಯುವಂತೆ ಇದೀಗ ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆ ಇದೆ ಎಂದು ತಮಿಳುನಾಡಿನ ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಇದರ ಪರಿಣಾಮ ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ ಎಂದು ವರಿದಿಯಾಗಿದೆ.
ಇನ್ನು ನವೆಂಬರ್ 30ರಿಂದ ಡಿಸೆಂಬರ್ 1ರವರೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಮಹಾಮಾರಿ ಕೊರೊನಾಗೆ ಮತ್ತೋರ್ವ ಜನಪ್ರತಿನಿಧಿ ಬಲಿ : ಕಿರಣ್ ಮಹೇಶ್ವರಿ ನಿಧನ
ಇದಲ್ಲದೆ ಡಿಸೆಂಬರ್ 1ರಿಂದ 3ರವರೆಗೆ ನೈರುತ್ಯ ಭಾಗ ಮತ್ತು ಶ್ರೀಲಂಕಾದ ಪೂರ್ವ ಭಾಗದ ಕರಾವಳಿ ಹಾಗೂ ಡಿಸೆಂಬರ್ 2ರಿಂದ 4ರವರೆಗೆ ದಕ್ಷಿಣ ತಮಿಳುನಾಡು-ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
Cyclone









