Tamilunadu: ಕಬ್ಬಡಿ ಆಡುವಾಗಲೇ ಹೃದಯಾಘಾತ – ಯುವಕ ಸಾವು
ನಿನ್ನೆ ರಾತ್ರಿ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಬಳಿಯ ಮನ್ನಾಡಿಕುಪ್ಪಂ ಗ್ರಾಮದಲ್ಲಿ 22 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬ ಕಬ್ಬಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಮೃತ ವಿಮಲರಾಜ್ ವಾರಾಂತ್ಯದ ರಜೆಯಲ್ಲಿ ಮನೆಗೆ ಬಂದಿದ್ದ. ನಿನ್ನೆ ಸಂಜೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳಾಯಿ ತಂಡವನ್ನು ಪ್ರತಿನಿಧಿಸಿದ್ದಾನೆ.
ಕಬ್ಬಡಿ ಆಟದಲ್ಲಿ ರೈಡ್ ಗೆ ಹೋದಾಗ ಎದುರಾಳಿ ತಂಡದ ಸದಸ್ಯರು ಆತನನ್ನ ಕ್ಯಾಚ್ ಹಿಡಿದು ಎಳೆದ ತಕ್ಷಣ ಆತ ನೆಲಕ್ಕೆ ಕುಸಿದಿದ್ದಾನೆ. ತಕ್ಷಣ ಆತನನ್ನ ಪಂರುತಿ ಜನರಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ
ಯುವಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.