Tamilunadu : ಸಿಎಂ ಸ್ಟಾಲಿನ್ ಪತ್ನಿಯವರನ್ನ ಮಳೆಯಿಂದ ರಕ್ಷಿಸಲು ದೇವರ ಛತ್ರಿ ಬಳಕೆ – ಬಿಜೆಪಿ ಕಿಡಿ…
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನ ಮಳೆಯಿಂದ ರಕ್ಷಿಸಲು ದೇವರಿಗೆ ಬಳಸುವ ಅಲಂಕೃತ ಛತ್ರಿಯನ್ನ ಹಿಡಿದಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ತಮಿಳು ನಾಡಿನಲ್ಲಿ ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಚೆನ್ನೈ ಸಮೀಪದ ತಿರುವೊಟ್ಟಿಯೂರಿನ ತ್ಯಾಗರಾಜಸ್ವಾಮಿ ದೇವಸ್ಥಾನವೊಂದಕ್ಕೆ ದುರ್ಗಾ ಸ್ಟಾಲಿನ್ ಭೇಟಿ ಕೊಟ್ಟ ಸಮಯದಲ್ಲಿ ಈ ಘಟನೆ ನಡೆದಿದೆ.
ಶೆಫಾಲಿ ವೈದ್ಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನ ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕ್ರೀಡಾ ಅಭಿವೃದ್ಧಿ ಸೆಲ್ ಮುಖ್ಯಸ್ಥ ಅಮರ್ ಪ್ರಸಾದ್ ರೆಡ್ಡಿ ಅವರು ಮರುಟ್ವೀಟ್ ಮಾಡಿದ್ದಾರೆ.
Look at the Umbrella being used. pic.twitter.com/ESKZ0RQAyA
— Bulls Eye (@sreeramjvc) December 11, 2022
“ದೇವರಿಗೆ ಬಳಸುವ ಚೀನಾ ಅಗ್ಗದ ಛತ್ರಿ, ಟಿಎನ್ ಸಿಎಂ ಸ್ಟಾಲಿನ್ ಪತ್ನಿಗೆ ದೇವರ ಛತ್ರಿ. ಭ್ರಷ್ಟ ಮಾತ್ರವಲ್ಲ, ನೈತಿಕವಾಗಿ ದಿವಾಳಿಯಾಗಿದೆ. ಅಸಹ್ಯಕರ ಎಂದು ಶೆಫಾಲಿ ಟ್ವಿಟ್ ಮಾಡಿದ್ದಾರೆ.
ದುರ್ಗಾ ಸ್ಟಾಲಿನ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಹೊರಡುವಾಗ ಮಳೆ ಸುರಿಯಲಾರಂಭಿಸಿತು. ದುರ್ಗಾ ಸ್ಟಾಲಿನ್ ಅವರನ್ನು ಮಳೆಯಿಂದ ರಕ್ಷಿಸಲು ದೇವರ ಛತ್ರಿಯನ್ನ ಬಳಸಿದ್ದಾರೆ. ಈ ವಿಡಿಯೋ ತಮಿಳುನಾಡಿನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
Tamilunadu : God’s umbrella used to protect CM Stalin’s wife from rain – BJP sparks…








