Tanveer Sait | ಶ್ರೀರಂಗಪಟ್ಟಣದಲ್ಲಿ100 ಅಡಿ ಎತ್ತರದ ಟಿಪ್ಪು ಪ್ರತಿಮೆ
ಮೈಸೂರು : ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ನೂರು ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸುವುದು ಖಚಿತ ಎಂದು ಶಾಸಕ ತನ್ವೀತ್ ಸೇಠ್ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ತನ್ವೀರ್ ಸೇಠ್, ಟಿಪ್ಪು ಸುಲ್ತಾನ್ ಪ್ರತಿಮಿ ನಿರ್ಮಿಸೋದು ಖಚಿತವಾಗಿದೆ,
ಆದ್ರೆ ಕಂಚಿನ ಪ್ರತಿಮೆನಾ ಅಥವಾ ಪಂಚಲೋಹದ ಪ್ರತಿಮೆನಾ ಅನ್ನೋದು ಶೀಘ್ರದಲ್ಲಿಯೇ ತೀರ್ಮಾನ ಮಾಡುತ್ತೇವೆ.

ಮುಸ್ಲಿಂ ಧರ್ಮದಲ್ಲಿ ಪ್ರತಿಮೆ ಸ್ಥಾಪನೆ ನಿಷೇಧವಿದ್ದರೂ ಇಂದಿನ ಪರಿಸ್ಥಿತಿಗಾಗಿ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯವಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ತನ್ವೀರ್ ಸೇಠ್, ಟಿಪ್ಪು ವಿರೋಧಿಸಿದರೇ ತಮಗೆ ಲಾಭವಾಗುತ್ತದೆ ಎಂದು ಬಿಜೆಪಿ ಟಿಪ್ಪು ಸುಲ್ತಾನ್ ಹೆಸರನ್ನು ಬಳಸುತ್ತಿದೆ.
ಮೈಸೂರಿನ ರಂಗಾಯಣದಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಇದಕ್ಕೆ ನನ್ನ ವಿರೋಧವಿದೆ. ಈ ಬಗ್ಗೆ ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.








