ತನ್ವಿರ್ ಸೇಠ್ ಕೂಡಾ ಯಾಕ್ ಸಿಎಂ ಆಗ್ಬಾರ್ದು : ಸಿ.ಎಂ.ಇಬ್ರಾಹಿಂ CM Ibrahim
ಮೈಸೂರು : ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ವಿಚಾರವಾಗಿ ಈಗಾಗಲೇ ಭಾರಿ ಚರ್ಚೆ ನಡೆದಿದೆ. ಇದೇ ಚರ್ಚೆ ವೇಳೆ ತನ್ವೀರ್ ಸೇಠ್ ನಾನು ಕೂಡ ಸಿಎಂ ಕ್ಯಾಂಡಿಡೇಟ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ತನ್ವಿರ್ ಸೇಠ್ ಕೂಡಾ ಯಾಕ್ ಸಿಎಂ ಆಗ್ಬಾರ್ದು ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ತನ್ವಿರ್ ಸೇಠ್ ಕೂಡಾ ಯಾಕ್ ಸಿಎಂ ಆಗ್ಬಾರ್ದು..? ಲಿಂಗಾಯ್ತರಲ್ಲಿ, ಒಕ್ಕಲಿಗರಲ್ಲಿ ಇಲ್ವೋ. ಮುಸ್ಲಿಮರಲ್ಲಿ ಯಾಕೆ ಇರಬಾರದು..? 800ವರ್ಷ ದೇಶ ನಡೆಸಿರುವವರು ನಾವು, ಇದು ಬಸವಣ್ಣನ ನಾಡು, ಈ ನಾಡಿನಲ್ಲಿ ಅವಕಾಶ ಸಿಗದಿದ್ದ ಮೇಲೆ ಇನ್ನೆಲ್ಲಿ ಸಿಗಲಿದೆ ಎಂದರು.
ಇನ್ನು ಜಮೀರ್ ಸಿಎಂ ಆಗುವ ವಿಷಯ ಬಹಳ ದೂರದ ವಿಚಾರ ಎಂದ ಸಿ.ಎಂ.ಇಬ್ರಾಹಿಂ, ಇನ್ನು ಅವರಿಗೆ ಸಿನಿಯರಿಟಿ ಬರಬೇಕಿದೆ. ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಆಗಿದ್ದಾರೆ. ಮುಂದಿನ ಸಿಎಂ ಆಗುವ ವಿಚಾರ ಪಕ್ಷದಲ್ಲಿ ತೀರ್ಮಾನ ಆಗಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ತನ್ವಿರ್ ಸೇಠ್ ನಡುವಿನ ಮನಸ್ತಾಪವನ್ನ ಸರಿ ಮಾಡಲು ನಾನಿದ್ದೆನಲ್ಲ. ನನ್ನದು ದೊಡ್ಡ ಲೆವೆಲ್ ಅಸಮಾಧಾನ. ಇದು ಸಣ್ಣ ಲೆವೆಲ್ ನ ಅಸಮಾಧಾನ. ಸಿದ್ದರಾಮಯ್ಯ ನಾನು ದೆಹಲಿಗೆ ಹೋಗ್ತಿದ್ದೆವೆ, ಅಲ್ಲಿ ಎಲ್ಲವನ್ನು ಮಾತನಾಡ್ತೇವೆ ಎಂದಿದ್ದಾರೆ.









