ಕೋಲ್ಕತ್ತಾ : ಬಂಗಾಳಿ ಹಿರಿಯ ನಟ ಹಾಗೂ ರಾಜಕಾರಣಿ ತಪಸ್ ಪಾಲ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ಮುಂಬೈನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮುಂಬೈಗೆ ತನ್ನ ಪುತ್ರಿಯ ಮನೆಗೆ ತೆರಳಿದ್ದ ವೇಳೆ ಕೋಲ್ಕತ್ತಾಗೆ ವಾಪಸ್ ಆಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪಾಲ್, ಕಳೆದ ಎರಡು ವರ್ಷಗಳಿಂದ ಅನೇಕ ಬಾರಿ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕೃಷ್ಣನಗರದಿಂದ ಎರಡು ಬಾರಿ ಸಂಸತ್ ಸದಸ್ಯರು ಹಾಗೂ ಅಲಿಪೊರ್ ನಿಂದ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದ ಪೌಲ್, ಪುತ್ರಿ ಹಾಗೂ ಪತ್ನಿಯನ್ನು ಆಗಲಿದ್ದಾರೆ.
1989ರಲ್ಲಿ ದಾದರ್ ಕೀರ್ತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಪಾಲ್, ರೋಮ್ಯಾಂಟಿಕ್ ಹೀರೋ ಆಗಿ ಪ್ರೇಕ್ಷಕರ ಮನ ಕದ್ದಿದ್ದರು. 1981ರಲ್ಲಿ ಸಾಹೇಬ್ ಚಿತ್ರಕ್ಕಾಗಿ ಫಿಲಂ ಪೇರ್ ಪ್ರಶಸ್ತಿ ಪಡೆದುಕೊಂಡಿದ್ದರು.
ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...








