ಮಂಗಳೂರು: ಚಂದನವನದ ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir), ನಟಿ ಸೋನಲ್ ಮೊಂಥೆರೋ (Sonal Monteiro) ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಈ ಜೋಡಿ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ (Christian Tradition) ಮದುವೆಯಾಗಿದೆ. ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್ ನಲ್ಲಿ ಈ ಜೋಡಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿತ್ತು. ಈಗ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ವಿವಾಹವಾಗಿದೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಉಂಗುರ ಬದಲಾಯಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೋನಲ್ ಕ್ರಿಶ್ಚಿಯನ್ ಸಂಪ್ರದಾಯಸ್ಥರಾಗಿರುವ ಹಿನ್ನೆಲೆಯಲ್ಲಿ ಆ ಧರ್ಮದಂತೆಯೂ ಮದುವೆಯಾಗಿದ್ದಾರೆ.
ಸೋನಲ್ ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚರ್ಚ್ ವೆಡ್ಡಿಂಗ್ ನಂತರ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ.








