ಟಾಟಾ ಸನ್ಸ್ ಗೆ ಏರ್ ಇಂಡಿಯಾ | ಸುದ್ದಿ ಅಲ್ಲಗೆಳೆದ ಕೇಂದ್ರ Air India saaksha tv
ನವದೆಹಲಿ : ಸರ್ಕಾರ ಒಡೆತನದ ಏರ್ ಇಂಡಿಯಾ ಟಾಟಾ ಸನ್ಸ್ ಪಾಲಾಗಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆ.
ನಷ್ಟದಲ್ಲಿರುವ ಸರ್ಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳ ಹಣಕಾಸು ಬಿಡ್ ಮುಕ್ತಾಯವಾಗಿದ್ದು, ಏರ್ ಇಂಡಿಯಾ ಟಾಟಾ ಸನ್ಸ್ ಪಾಲಾಗಿದೆ ಎಂದು ವರದಿಯಾಗಿತ್ತು.
ಈ ಬಗ್ಗೆ ಇದೀಗ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಾಗ ಖಂಡಿತವಾಗಿಯೂ ಮಾಧ್ಯಮಗಳಿಗೆ ಖುದ್ದಾಗಿ ತಿಳಿಸಲಾಗುವುದು ಎಂದಿದೆ.
ಅಲ್ಲದೇ ಇದೇ ವೇಳೆ ಏರ್ ಇಂಡಿಯಾ ಟಾಟಾ ಗ್ರೂಪ್ ಪಾಲಾಗಿರುವ ಮಾಹಿತಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಅಂದಹಾಗೆ ಹರಾಜಿನಲ್ಲಿ ಏರ್ ಇಂಡಿಯಾವನ್ನು ಮರು ಪಡೆಯುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಬ್ಲೂಮ್ ಬರ್ಗ್ ಕ್ವಿಂಟ್ ವರದಿ ಮಾಡಿತ್ತು.









