PBKS vs DC Match | ಪ್ಲೇ ಆಫ್ಸ್ ಗಾಗಿ ಡೆಲ್ಲಿ – ಪಂಜಾಬ್ ಗುದ್ದಾಟ
15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನ 64 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳು ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಈ ಮೊದಲು ಎದುರು ಬದುರಾಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.
ಎರಡೂ ತಂಡಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡೋದಾದ್ರೆ
ಮಯಾಂಕ್ ಅಗರ್ ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಈ ಸೀಸನ್ ನಲ್ಲಿ 12 ಪಂದ್ಯಗಳನ್ನಾಡಿದೆ. ಈ ಪೈಕಿ ಆರು ಪಂದ್ಯಗಳಲ್ಲಿ ಗೆಲುವು, ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇತ್ತ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಅಷ್ಟೇ ಪಂದ್ಯಗಳನ್ನು ಗೆದ್ದು ಸೋತಿದೆ. ಆದ್ರೂ ರನ್ ರೇಟ್ ಆಧಾರದಲ್ಲಿ ಐದನೇ ಸ್ಥಾನದಲ್ಲಿದೆ.
ಇನ್ನು ಎರಡು ತಂಡಗಳು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 54 ರನ್ ಗಳಿಂದ ಗೆದ್ದಿದೆ. ಈ ಪಂದ್ಯದಲ್ಲಿ ಜಾನಿ ಬೈರ್ ಸ್ಟೋ, ಲಿಯಾಮ್ ಲೀವಿಂಗ್ ಸ್ಟೋನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಜೊತೆಗೆ ರಬಾಡ ಬೌಲಿಂಗ್ ನಲ್ಲಿ ಅಬ್ಬರಿಸಿದ್ರು. ಇದೇ ಪ್ರದರ್ಶನವನ್ನು ಮುಂದುವರೆಸುವ ಪ್ಲಾನ್ ನಲ್ಲಿದೆ ಪಂಜಾಬ್ ತಂಡ.
ಮತ್ತೊಂದು ಕಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ವಿರುದ್ದ ಸೆಣಸಿತ್ತು.ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 52, ಮಿಚೆಲ್ ಮಾರ್ಷ್ 89 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಪಂಜಾಬ್ ತಂಡದಲ್ಲಿ ಮೇಲ್ನೋಟಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಆರಂಭದಲ್ಲಿ ಜಾನಿ ಬೈರ್ ಸ್ಟೋ, ಶಿಖರ್ ಧವನ್ ಪವರ್ ಪ್ಲೇ ಲಾಭಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ರಾಜಪಕ್ಸೆ, ಮಯಾಂಕ್ ಅಗರ್ ವಾಲ್, ಲಿಯಾನ್ ಲೀವಿಂಗ್ ಸ್ಟೋನ್ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಬೌಲಿಂಗ್ ನಲ್ಲಿ ರಿಷಿ ಧವನ್, ಕಗಿಸೋ ರಬಾಡ, ಹರ್ಪೀತ್ ಬ್ರಾರ್, ಅರ್ಷದೀಪ್ ಸಿಂಗ್ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿಚಾರಕ್ಕೆ ಬಂದರೇ ಸಂಘಟಿತ ಆಟ ತಂಡದ ಆಸ್ತಿಯಾಗಿದೆ. ಬ್ಯಾಟಿಂಗ್ ನಲ್ಲಿ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಪಂತ್ ಮಿಂಚುತ್ತಿದ್ದಾರೆ. ಬೌಲಿಂಗ್ ಬಲ್ಲಿ ಕುಲ್ ದೀಪ್ ಯಾದವ್, ಚೇತನ್ ಸಕಾರಿಯಾ ಲಯಬದ್ಧ ದಾಳಿ ನಡೆಸುತ್ತಿದ್ದಾರೆ. TATA IPL 2022 PBKS vs DC Prediction