Tata Nano : ಟಾಟಾ ನ್ಯಾನೋ ಕಾರನ್ನ ಸೋಲಾರ್ ಕಾರ್ ಆಗಿ ಪರಿವರ್ತಿಸಿದ ವ್ಯಕ್ತಿ….
ಪಶ್ಚಿಮ ಬಂಗಳದ ಮನೋಜಿತ್ ಮೊಂಡಲ್ ಎಂಬ ವ್ಯಕ್ತಿ ಟಾಟಾ ನ್ಯಾನೋ ಕಾರನ್ನ ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ ಸೌರಶಕ್ತಿಯಿಂದ ಕಾರ್ ಚಲಾಯಿಸುತ್ತಿದ್ದಾರೆ. ಈ ಕಾರನ್ನ ಚಲಾಯಿಸಲು ಯಾವುದೇ ಪೆಟ್ರೋಲ್ ಅಥವಾ ಎಂಜಿನ್ ನ ಅಗತ್ಯ ಇಲ್ಲ.
ಕಾರಿನ ನಿರ್ವಹಣಾ ವೆಚ್ಚ ಮಾತ್ರ ಎಲ್ಲರನ್ನ ಆಶ್ಚರ್ಯಪಡಿಸುತ್ತದೆ. ಪೆಟ್ರೋಲ್ ಮುಕ್ತ ಈ ಸೋಲಾರ್ ಕಾರ್ ಕೇವಲ 30 ರಿಂದ 35 ರೂಗಳಲ್ಲಿ 100 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಇದೀಗ ಆಪ್ರದೇಶದ ಐಕಾನ್ ಆಗಿ ಮಾರ್ಪಟ್ಟಿದೆ ಕಾರ್.
ಸದ್ಯ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಂಕುರಾದ ಮನೋಜಿತ್ ಮಂಡಲ್ ಸೌರಶಕ್ತಿ ಚಾಲಿತ ಕಾರು ತಯಾರಿಸಿ ಅದಕ್ಕೆ ಪರ್ಯಾಯವನ್ನ ಹುಡುಕಿದ್ದಾರೆ. ಪ್ರತಿ ಕಿಲೋಮೀಟರ್ ವೆಚ್ಚ 80 ಪೈಸೆ. ಎಂಜಿನ್ ಇಲ್ಲದ ಕಾರಣ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಬರುವುದಿಲ್ಲ. ಆದರೆ, ಗೇರ್ ವ್ಯವಸ್ಥೆ ಇದೆ. ಈ ಅದ್ಭುತ ಕಾರು ನಾಲ್ಕನೇ ಗೇರ್‌ನಲ್ಲಿ ಬಹುತೇಕ ಮೌನವಾಗಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ.
ಮನೋಜಿತ್ ಮಂಡಲ್ ಬಾಲ್ಯದಿಂದಲೂ ಹೊಸದನ್ನು ಮಾಡಬೇಕೆಂದು ಬಯಸಿದ ವ್ಯಕ್ತಿ. ಹಾಗಾಗಿ, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೊರಗದೆ ತಾವೇ ಸೋಲಾರ್ ಕಾರನ್ನು ನಿರ್ಮಿಸಿದ್ದಾರೆ. ಮನೋಜಿತ್ ಕಾರನ್ನ ಪರಿವರ್ತಿಸುವಾಗ ಹಲವು ಸವಾಲುಗಳನ್ನ ಎದುರಿಸಿದರು. ಇಂಧನ ಸಮಸ್ಯೆ ಬಗೆಹರಿಸಲು ಮನೋಜಿತ್ ಮಂಡಲ್ ಹಲವರಲ್ಲಿ ಛಾಪೂ ಮೂಡಿಸುವ ಕೆಲಸ ಮಾಡಿದ್ದಾರೆ.
Tata Nano : The man who converted the Tata Nano car into a solar car….








