ಮಹಾನ್ : ಖ್ಯಾತ ಉಧ್ಯಮಿ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಾರ್ಥಕೆತೆಯನ್ನು ದೇಶ ನೆನೆಯುತ್ತಿದೆ.
1980-90ರ ದಶಕದಲ್ಲಿ ಭಾರತದಲ್ಲಿ ಯಾವುದೇ ಸ್ವದೇಶಿ ಕಂಪನಿಗಳು ಕಾರುಗಳನ್ನು ದೇಶದಲ್ಲಿ ಉತ್ಪಾದಿಸುತ್ತಿರಲಿಲ್ಲ. ಆ ವೇಳೆ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಕಾರು ಉತ್ಪಾದಿಸಲಾಗುತ್ತಿತ್ತು. ಜೊತೆಗೆ ವಿದೇಶಿ ಕಂಪನಿಗಳ ಕಾರುಗಳ ಆರ್ಭಟ ಜೋರಾಗಿತ್ತು. 1998ರಲ್ಲಿ ಭಾರತದಲ್ಲಿ ಟಾಟಾ ಕಂಪನಿಯು ಪ್ಯಾಸೆಂಜರ್ ವಾಹನದ ಮಾರುಕಟ್ಟೆಗೆ ‘ಟಾಟಾ ಇಂಡಿಕಾ’ ಕಾರ್ನೊಂದಿಗೆ ಸ್ವದೇಶಿ ಮಾರುಕಟ್ಟೆಗೆ ಬಂದಿತು.
ಆದರೆ. ಅವರ ನಿರೀಕ್ಷೆಯಂತೆ ಕಾರು ಉದ್ಯಮ ಬೆಳೆಯಲಿಲ್ಲ. ಆಗ ಕಂಪನಿ ನಷ್ಟ ಅನುಭವಿಸಿತು. ಆಗ ವಾಹನ ತಯಾರಿಕೆ ಉದ್ಯಮವನ್ನೇ ಮಾರಾಟ ಮಾಡಲು ರತನ್ ಟಾಟಾ ನಿರ್ಧರಿಸಿದ್ದರು. ಆಗ ಅಮೆರಿಕದ ಫೋರ್ಡ್ ಕಂಪನಿಯ ಅಂದಿನ ಮುಖ್ಯಸ್ಥ ಬಿಲ್ ಫೋರ್ಡ್ ಭೇಟಿಯಾಗಿ ಮಾರಾಟದ ಮಾತುಕತೆ ನಡೆಸಿದ್ದರು. ಆದರೆ ಬಿಲ್ ಫೋರ್ಡ್ ಮತ್ತು ಅವರ ತಂಡ ಅಹಂಕಾರದಿಂದಲೇ ಖರೀದಿ ಮಾಡಲು ಮುಂದಾಯಿತು.
ಜೊತೆಗೆ ರತನ್ ಟಾಟಾ ಅವರನ್ನು ಅತ್ಯಂತ ಕೀಳಾಗಿ ನೋಡಿತು. ‘ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು?’ ಎಂದು ತುಂಬಾ ಹೀನಾಯವಾಗಿ ಮಾತನಾಡಿತ್ತು ಎನ್ನಲಾಗಿದೆ. ಹೀಗಾಗಿ ಅವರು ತಮ್ಮ ಕಂಪನಿ ಮಾರಾಟ ಮಾಡಿರಲಿಲ್ಲ. ಈ ಅವಮಾನ ರತನ್ ಅವರಲ್ಲಿ ಕಿಚ್ಚು ಹೆಚ್ಚಿಸಿತು.
2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಫೋರ್ಡ್ ಕಂಪನಿಯು ದಿವಾಳಿಯಾಗಿತ್ತು. ಅದರ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಪೂರ್ಣ ನಷ್ಟಕ್ಕೆ ಇಳಿದಿತ್ತು. 1989ರಲ್ಲಿ ಜಾಗ್ವಾರ್ನನ್ನು 2.5 ಶತಕೋಟಿ ಡಾಲರ್ ಕೊಟ್ಟು, 2000ರಲ್ಲಿ 2.7 ಶತಕೋಟಿ ಡಾಲರ್ ಕೊಟ್ಟು ಲ್ಯಾಂಡ್ ರೋವರ್ ನ್ನು ಫೋರ್ಡ್ ಖರೀದಿಸಿತ್ತು. ಹೀಗಾಗಿ ಎರಡೂ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಲ್ ಫೋರ್ಡ್, ಜಗತ್ತಿನ ಮುಂದೆ ಮನವಿ ಮಾಡುತ್ತಿತ್ತು.
ಆಗ ರತನ್ ಟಾಟಾ, ಎರಡೂ ಕಂಪನಿಗಳನ್ನು ಕೇವಲ 2.3 ಶತಕೋಟಿ ಡಾಲರ್ ಗೆ ಖರೀದಿಸಿ ಲಾಭ ಮಾಡಿಕೊಂಡರು. ಆಗ ಬಿಲ್ ಫೋರ್ಡ್ ಧನ್ಯವಾದ ಸಲ್ಲಿಸಿದ್ದರು. ನಂತರ ಟಾಟಾ ಕಂಪನಿ ವಾಹನಗಳ ಲೋಕದಲ್ಲಿ ಉತ್ತುಂಗಕ್ಕೆ ತಲುಪಿತು.