Taxpayers Budget: ಆದಾಯ ತೆರಿಗೆಯಲ್ಲಿ ದೊಡ್ಡ ರಿಲೀಫ್; 5 – 7 ಲಕ್ಷಕ್ಕೆ ಏರಿಕೆ…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8 ವರ್ಷಗಳ ನಂತರ ಆದಾಯ ತೆರಿಗೆಯಲ್ಲಿ ದೊಡ್ಡ ರಿಲೀಫ್ ನೀಡಿದ್ದಾರೆ. ಮುಂದಿನ ಹಣಕಾಸು ವರ್ಷ 2023-24 ಕ್ಕೆ ಹೊಸ ತೆರಿಗೆ ಪದ್ಧತಿಯನ್ನ ಆಯ್ಕೆ ಮಾಡಿಕೊಂಡರೇ ತೆರಿಗೆ ರಿಯಾಯಿತಿ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಈ ಮೊದಲು 5 ಲಕ್ಷ ರುಪಾಯಿ ಇತ್ತು. ಇದೀಗ ನೀವು 7 ಲಕ್ಷ ರುಪಾಯಿಗಳಿಗಿಂತ ಹೆಚ್ಚಿದ್ದರೆ ಮಾತ್ರ ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೀರ.
ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು ತೆರಿಗೆ ಸ್ಲ್ಯಾಬ್‌ಗಳನ್ನ ಸಹ ಬದಲಾಯಿಸಿದ್ದಾರೆ. ಹೊಸ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ, ರೂ 3 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತವಾಗಿರುತ್ತದೆ.
ಹಳೆಯ ತೆರಿಗೆ ಪದ್ಧತಿಯಲ್ಲಿ, 2.5 ಲಕ್ಷದವರೆಗಿನ ವಾರ್ಷಿಕ ಆದಾಯ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ. ನಿಮ್ಮ ಆದಾಯ 2.5 ರಿಂದ 5 ಲಕ್ಷಗಳ ನಡುವೆ ಇದ್ದರೆ, ನೀವು 5 ಲಕ್ಷಗಳ ಮೇಲೆ 5% ತೆರಿಗೆಯನ್ನ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87A ಪ್ರಯೋಜನವನ್ನ ಪಡೆದುಕೊಳ್ಳುವ ಮೂಲಕ, 5 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ತೆರಿಗೆ ಉಳಿಸಲು ಸಾಧ್ಯವಾಗುತ್ತದೆ.
2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯದ ಮೇಲೆ ಸರ್ಕಾರವು 5% ದರದಲ್ಲಿ ಆದಾಯ ತೆರಿಗೆಯನ್ನು ವಿಧಿಸುತ್ತದೆ, ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87A ಅಡಿಯಲ್ಲಿ ಈ ತೆರಿಗೆಯನ್ನ ಮನ್ನಾ ಮಾಡಲಾಗುತ್ತದೆ. ಇದರರ್ಥ ಯಾವೊಬ್ಬ ವ್ಯಕ್ತಿಯ ವಾರ್ಷಿಕ ತೆರಿಗೆಯ ಆದಾಯ 5 ಲಕ್ಷ ರೂಪಾಯಿಗಳವರೆಗೆ ಇದ್ದರೆ, ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ ನಿಮ್ಮ ಗಳಿಕೆ 5 ಲಕ್ಷ 10 ಸಾವಿರ ರೂಪಾಯಿಯಾಗಿದ್ದರೆ, 10 ಸಾವಿರ ರೂಪಾಯಿಗೆ ತೆರಿಗೆ ಪಾವತಿಸುವ ಬದಲು, 5.10 ಲಕ್ಷ – 2.5 ಲಕ್ಷ = 2.60 ಲಕ್ಷದ ಮೇಲೆ ತೆರಿಗೆ ಪಾವತಿಸಬೇಕು.
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು 2 ಆಯ್ಕೆ
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು 2 ಆಯ್ಕೆಗಳಿವೆ. ಹೊಸ ಆಯ್ಕೆಯನ್ನ 1 ಏಪ್ರಿಲ್ 2020 ರಂದು ಜಾರಿಗೆ ಬಂದಿದೆ. ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನ ಡೀಫಾಲ್ಟ್ ಆಯ್ಕೆ ಮಾಡಿದೆ. ಅಂದರೆ, ಬಜೆಟ್‌ನಲ್ಲಿ ಆದಾಯ ತೆರಿಗೆಯಿಂದ ನೀಡಲಾಗಿರುವ ವಿನಾಯಿತಿ ಇದಕ್ಕೆ ಮಾತ್ರ ಅನ್ವಯಿಸುತ್ತದೆ. ಹಳೆಯ ತೆರಿಗೆ ಪದ್ದತಿಯನ್ನ ಸೆಲೆಕ್ಟ್ ಮಾಡಿದರೇ ಈ ತೆರಿಗೆ ವಿನಾಯಿತಿ ಸಿಗುವುದಿಲ್ಲ.
Taxpayers Budget: Rebate increased from Rs 5 lakh to Rs 7 lakh in the new tax regime; 2 options will continue to be available for income tax return








