TCL Tab 10 5G: 8000mah ಬ್ಯಾಟರಿಯೊಂದಿಗೆ TCL ನಿಂದ ಅದ್ಭುತ 5G ಟ್ಯಾಬ್ಲೆಟ್ ಬಿಡುಗಡೆ..
ಇಂದಿನ ಗ್ಯಾಡ್ಜೆಟ್ ಜಮಾನದಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಗೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಆದ್ರೆ ವರ್ಕ್ ಫ್ರಂ ಹೋಮ್ ಶುರು ಆದಾಗಿನಿಂದ ದೊಡ್ಡ ಸ್ಕ್ರೀನ್ ಗಳ ಅಗತ್ಯವೂ ಹೆಚ್ಚಾಗಿದೆ. ಎಲ್ಲಾ ಕಡೆ ಲ್ಯಾಪ್ ಟಾಪ್ ಒಯ್ಯೂವುದಕ್ಕೂ ಜನ ಹಿಂದೆ ಸರಿಯುತ್ತಾರೆ. ಈ ಕಾರಣಕ್ಕಾಗಿ ಟ್ಯಾಬ್ಲಟ್ ಗಳು ಮತ್ತೊಮ್ಮೆ ಜನಪ್ರಿಯವಾಗುತ್ತಿವೆ. ಈ ಮಧ್ಯೆ ಲೆಜೆಂಡರಿ ಟೆಕ್ನಾಲಜಿ ಕಂಪನಿ TCL ಅತ್ಯುತ್ತಮ ಪೀಚರ್ಸ್ ಗಳೊಂದಿಗೆ ಮತ್ತು 5G ಸಿಮ್‌ಗೆ ಬೆಂಬಲದೊಂದಿಗೆ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ನ ಹೆಸರು TCL Tab 10.
ವಿಶೇಷವೆಂದರೆ ಟಿಸಿಎಲ್ ಕಡಿಮೆ ಬೆಲೆಯಲ್ಲಿ ಫೀಚರ್ ಪ್ಯಾಕ್ಡ್ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಕಂಪನಿಯ ಹೊಸ TCL ಟ್ಯಾಬ್ 10 5G ಸಂಪರ್ಕ ಸಾಧನವಾಗಿದ್ದು, ಇದು ದೊಡ್ಡ ಬ್ಯಾಟರಿ ಮತ್ತು ಪೂರ್ಣ HD ಸ್ಕ್ರೀನ್ ಹೊಂದಿದೆ. ಜೊತೆಗೆ MediaTek Kompanio 800T ಪ್ರೊಸೆಸರ್ ನೀಡಲಾಗಿದೆ.

ಇದಲ್ಲದೆ ಈ ಟ್ಯಾಬ್ಲೆಟ್ 4GB RAM ಮತ್ತು 32GB ಸ್ಟೋರೇಜ್ ಹೊಂದಿದೆ. ಸೆಕ್ಯೂರಿಟಿಗಾಗಿ ಫೇಸ್ ರೆಕಗ್ನೈಸೇಷನ್ ನೀಡಲಾಗಿದೆ. Android 12 ಆಪರೆಟಿಂಗ್ ಸಿಸ್ಟಮ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. TCL ಟ್ಯಾಬ್ 10, 5G ಟ್ಯಾಬ್ಲೆಟ್ ಆಗಿದ್ದು 8000mah ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಟ್ಯಾಬ್ಲೆಟ್ ಗಳಲ್ಲಿ ಡಿಸ್‌ಪ್ಲೇ ಅತ್ಯಂತ ಮುಖ್ಯ ವಿಷಯ. ಇದರ ಡಿಸ್‌ಪ್ಲೇಯಲ್ಲಿ NXTVISION ಅಭಿವೃದ್ಧಿಪಡಿಸಿದೆ. ಟ್ಯಾಬ್ಲೆಟ್‌ನ ಎರಡೂ ಬದಿಗಳಲ್ಲಿ ಕ್ಯಾಮೆರಾ ನೀಡಲಾಗಿದ್ದು, ಹಿಂಬದಿ ಕ್ಯಾಮರಾ 8MP ಮತ್ತು ಮುಂಬದಿ ಕ್ಯಾಮರಾ 5MP ಇದೆ.
TCL Tab 10 ಬೆಲೆ
TCL ಟ್ಯಾಬ್ 10 T- ಮೊಬೈಲ್ ನೆಟ್‌ವರ್ಕ್‌ನಲ್ಲಿ ಖರೀದಿಸಲು ಲಭ್ಯವಿದೆ. ಇದರ ಬೆಲೆ ಸುಮಾರು $ 300 (ಸುಮಾರು 24 ಸಾವಿರ ರೂಪಾಯಿಗಳು).








