ಮಾರ್ಕ್ಸ್ ಬೇಕಾ.. ಹಾಗಾದ್ರೆ ಲೈಂಗಿಕ ಕ್ರಿಯಗೆ ಒಪ್ಪಬೇಕು : ಕಾಮುಕ ಶಿಕ್ಷಕನ ಅಸಲಿಯತ್ತು..!
ರಾಜಸ್ಥಾನ: ಗುರು ಬ್ರಹ್ಮೋ , ಗುರು ವಿಷ್ಣು, ಗುರುದೇವೋ ಅಂತ ವಿದ್ಯೆ ಕಲಿಸುವ ಶಿಕ್ಷಕರನ್ನ ದೇವರ ಸಮಾನವಾಗಿ ಕಾಣಲಾಗುತ್ತೆ. ಅವರನ್ನ ಗೌರವಿಸಲಾಗುತ್ತೆ. ಆದರೆ ಕೆಲ ಶಿಕ್ಷಕರು ಆ ಪದಕ್ಕೆ ಅವಮಾನವೆಂಬಂತೆ ನೆಡೆದುಕೊಳ್ತಾರೆ. ಇದಕ್ಕೆ ಪೂರಕವೆಂಬಂತಿದೆ ಈ ನೀಚ ಶಿಕ್ಷಕನ ಕೃತ್ಯ. ರಾಜಸ್ಥಾನದ ನೀಮ್ರಾನಾದಲ್ಲಿ ಈ ಘಟನೆ ನಡೆದಿದೆ. ನೀಮ್ರಾನಾದ ಸರ್ಕಾರಿ ಶಾಲಾ ಶಿಕ್ಷಕ ನ ನೀಚ ಕೃತ್ಯಕ್ಕೆ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ಹೌದು.. ಮಕ್ಕಳಿಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ಪಾಠ ಹೇಳಿಕೊಡಬೇಕಾದ ಶಿಕ್ಷಕನೇ ನೀಚತನಕ್ಕೆ ಉದಾಹರಣೆಯೆಂಬಂತೆ ಕೆಲಸ ಮಾಡಿದ್ದಾನೆ.
ತಂಗಿಯ ಮೇಲೆ ಅಕ್ಕ ಹಾಗೂ ಆಕೆಯ ಸ್ನೇಹಿತರಿಂದಲೇ ನಿರಂತರ ಲೈಂಗಿಕ ದೌರ್ಜನ್ಯ ..!
45 ವರ್ಷದ ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ವಿದ್ಯಾರ್ಥಿನಿಯರ ಗುಪ್ತಾಂಗ ಮುಟ್ಟುವುದು, ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಇನ್ನೂ ಒಳ್ಳೆಯ ಮಾಕ್ರ್ಸ್ ಬೇಕಂದ್ರೆ ದೈಹಿಕವಾಗಿ ಸಂಪರ್ಕ ಬೆಳೆಸುವಂತೆಯೂ ಪೀಡಿಸುತ್ತಿದ್ದನಂತೆ. ಶಿಕ್ಷಕನ ನೆಡವಳಿಕೆಯಿಂದಾಗಿ ಬೇಸತ್ತಿದ್ದ ವಿದ್ಯಾರ್ಥಿನಿಯರು ಈ ಬಗ್ಗೆ ಶಾಲೆಯ ಮೇಲಾಧಿಕಾರಿಗಳ ಬಳಿ ಹೇಳಿಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೂ ವಿದ್ಯಾರ್ಥಿನಿಯರ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಈ ವಿಚಾರ ತಿಳಿಸಿದ್ದಾರೆ. ಬಳಿಕ ಈ ಕುರಿತು ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ತನಿಖೆ ಆರಂಭಿಸಿರೋ ಪೊಲೀಸರು ಶಿಕ್ಷಕನನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







