ದಾವಣಗೆರೆ: ಇತ್ತೀಚೆಗೆ ಆನ್ ಲೈನ್ ವಂಚಣೆಗೆ ಹೆಚ್ಚಿನ ಜನ ಬಲಿಯಾಗುತ್ತಿದ್ದಾರೆ. ಆದರೂ ಹಲವರಿಗೆ ಬುದ್ಧಿ ಬರುತ್ತಿಲ್ಲ. ಇಲ್ಲೊಬ್ಬ ಶಿಕ್ಷಕ ಹೆಚ್ಚಿನ ಹಣದಾಸೆಗಾಗಿ ಹಣ ಹೂಡಿಕೆ ಮಾಡಿಕೊಂಡು ಬರೋಬ್ಬರಿಗೆ 91.90 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಈ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಶಿಕ್ಷಕ ವಾಟ್ಸಾಪ್ ನೋಡುವಾಗ ಎನ್ ಜಿಸಿ (ನ್ಯೂಮೌಂಟ್ ಗೋಲ್ಡ್ ಕ್ಯಾಪಿಟಲ್) ಎಂಬ ವೆಬ್ ಸೈಟ್ ವೊಂದರ ಲಿಂಕ್ ಬಂದಿದೆ. ಕ್ಲಿಕ್ ಮಾಡಿದಾಗ ಇದು ಅಮೆರಿಕಾ (America) ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂದು ಶಿಕ್ಷಕರಿಗೆ ಹೇಳಲಾಗಿದೆ.
ಆಗ ಶಿಕ್ಷಕನಿಂದ ದಾಖಲೆಗಳನ್ನು ಪಡೆದು ರಿಜಿಸ್ಟರ್ ಮಾಡಿಸಿಕೊಂಡಿದೆ. ನಂತರ ಖಾತೆ ತೆರೆದು, ಲಾಭಾಂಶದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದ್ದಾರೆ. ನಿಮ್ಮ ಅಕೌಂಟ್‌ನಲ್ಲಿ ಲಾಭಾಂಶ ಸೇರಿ ಒಟ್ಟು 2 ಕೋಟಿ ರೂ. ಹಣ ಇದ್ದು, ವಿತ್ ಡ್ರಾ ಮಾಡಬೇಕೆಂದರೆ ಮತ್ತೆ 47.29 ಲಕ್ಷ ರೂ. ಹಣ ಪಾವತಿಸುವಂತೆ ಮೆಸೆಜ್ ಮಾಡಿದ್ದಾರೆ. ಇದನ್ನು ನಂಬಿ ಶಿಕ್ಷಕ ಹಣ ಹಾಕಿದ್ದಾರೆ. ಹೀಗೆ ಬರೋಬ್ಬರಿ 91.90 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಯಾರೋ ಅಪರಿಚಿತ ವ್ಯಕ್ತಿಗಳು ಎನ್ ಜಿಸಿ (NGC) ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾರೆ ಎಂಬುವುದು ಗೊತ್ತಾಗುತ್ತಿದ್ದಂತೆ ಶಿಕ್ಷಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ,.








