ಪಾಠದ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ಕಾಮುಕ ಶಿಕ್ಷಕನ ಅಸಲಿತ್ತು!
ಹೈದರಾಬಾದ್: ಲಾಕ್ ಡೌನ್ ಸಮಯದಲ್ಲಿ ಪಾಠ ಹೇಳಿಕೊಡೋ ನೆಪದಲ್ಲಿ ಕಾಮುಕ ಶಿಕ್ಷಕನೋರ್ವ 5 -6 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ವೆಸಗಗಿರೋ ನೀಚ ಕೃತ್ಯ ಬೆಳಕಿಗೆ ಬಂದಿದೆ. 7ರಿಂದ 11 ವಯಸ್ಸಿನ ಒಳಗಿನ ವಿದ್ಯಾರ್ಥಿನಿಯರ ಮೇಲೆ ಮೃಗೀಯ ವರ್ತನೆ ತೋರಿದ್ದಾನೆ.
ಈ ಕೇಸ್ ಬಗೆಹರಿಸಿ: 2.7 ರೂಪಾಯಿ ಬಹುಮಾನ ಪಡೆಯಿರಿ..!
ತೆಲಂಗಾಣದಲ್ಲಿ 40 ವರ್ಷದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಪಾಠ ಹೇಳಿಕೊಡುವುದಾಗಿ ಶಾಲೆಗೆ ಕರೆಸಿಕೊಳ್ಳುತ್ತಿದ್ದ. ಕೊರೊನಾ ಕಾರಣ ಕೊಟ್ಟು ಒಬ್ಬೊಬ್ಬರನ್ನೇ ಕರೆಸಿಕೊಳ್ಳುತ್ತಿದ್ದ. ಹೀಗೆ ಒಬ್ಬಂಟಿಯಾಗಿ ಬಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ, ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಧಮ್ಕಿ ಹಾಕ್ತಿದ್ದ.
ಅದರಂತೆಯೇ ಇತ್ತಿಚೆಗೆ ಶಾಲೆಗೆ ಹೋಗಿ ಬಂದ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯಕ್ಕೀಡಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರೋದು ಗೊತ್ತಾಗಿದೆ. ಬಾಲಕಿಯನ್ನು ವಿಚಾರಿಸಿದಾಗ ಶಿಕ್ಷಕನ ಅಸಲಿ ಮುಖವಾಡ ಕಳಚಿ ಬಿದ್ದಿದೆ.
ಏರ್ ಇಂಡಿಯಾ ಟಿಕೆಟ್ ಮೇಲೆ ಶೇ 50 ರಷ್ಟು ರಿಯಾಯ್ತಿ : ಷರತ್ತು ಅನ್ವಯ
ಇನ್ನೂ ವಿಚಾರ ತಿಳಿಯುತ್ತಿದ್ದಂತೆ, ಬಾಲಕಿಯ ಪೋಷಕರು ಮತ್ತು ಗ್ರಾಮಸ್ಥರು ಸೇರಿ ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಗೂಸ ಕೊಟ್ಟಿದ್ದಾರೆ. ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈತನನ್ನ ಪೊಲೀಸರು ಬಂಧಿಸಿದ್ದಾರೆ. ಶಾಲೆಯ ಬೇರೆಯ ವಿದ್ಯಾರ್ಥಿನಿಯರನ್ನೂ ವಿಚಾರಿಸಿದಾಗ ಇದೇ ರೀತಿ 5-6 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ವಿಚಾರ ಬೆಳಕಿಗೆ ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel