ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡ ಶಿಕ್ಷಕಿ ಹೋಟೆಲ್ ತೆರೆದ ಕಥೆ…
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹೇರಲಾಗಿದ್ದ ಲಾಕ್ ಡೌನ್ ಜನ ಸಾಮಾನ್ಯ ಜೀವನದ ಮೇಲೆ ತಡೆಯಲಾರದಷ್ಟು ಪರಿಣಾಮ ಬೀರಿದೆ. ದೇಶಾದ್ಯಂತ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅಂತಹ ಅನೇಕ ಜನರು ತಾವು ತೊಡಗಿಸಿಕೊಂಡಿದ್ದ ವೃತ್ತಿಗಳನ್ನು ಬಿಟ್ಟು ಜೀವನೋಪಾಯಕ್ಕಾಗಿ ಹೊಸ ಹೊಸ ಮಾರ್ಗಗಳನ್ನ ಆಯ್ದುಕೊಂಡಿದ್ದಾರೆ. ಅಂತಹ ಒಂದು ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ದೆಹಲಿಯಲ್ಲಿ ಕೋವಿಡ್‌ನಿಂದಾಗಿ ಕೆಲಸವನ್ನು ಕಳೆದುಕೊಂಡ ಶಿಕ್ಷಕಿ ಈಗ ಹೋಟೆಲ್ ಶುರುಮಾಡಿದ್ದಾರೆ. ಅದೂ ಕೂಡ ಮನೆಯಲ್ಲಿ. ಮನೆಯಲ್ಲಿ ಬೇಯಿಸಿದ ಆಹಾರವನ್ನ ತಯಾರಿಸಿ ಸ್ಟಾಲ್‌ನಲ್ಲಿ ಮಾರಾಟ ಮಾಡುತ್ತಿರುವ ಶಿಕ್ಷಕಿಯ ಸ್ಟೋರಿ ಈಗ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಶಿಕ್ಷಕಿ ಹೊಟೆಲ್ ಶುರುಮಾಡಿದ ಈ ವೀಡಿಯೊವನ್ನು ಹಲವು ಗಂಟೆಗಳ ಹಿಂದೆ ಈಟ್ ದಿಸ್ ದೆಹಲಿಯ ಇನ್‌ಸ್ಟಾಗ್ರಾಮ್ ಪುಟ ಹಂಚಿಕೊಂಡಿದೆ.
https://www.instagram.com/p/CaMFUKFjMsI/?utm_source=ig_embed&utm_campaign=embed_video_watch_again
ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಶಿಕ್ಷಕಿ ಸುಮನ್, ರಾಜ್ಮಾ, ಖಾದಿ, ಚಪಾತಿ ಮತ್ತು ಚಟ್ನಿ ಸೇರಿದಂತೆ ಮನೆಯಲ್ಲಿ ಬೇಯಿಸಿದ ಥಾಲಿಯನ್ನು ಕೇವಲ 60 ರೂ ಗೆ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ವೀಡಿಯೊದ ಶೀರ್ಷಿಕೆಯ ಪ್ರಕಾರ, ದೆಹಲಿಯ ರೋಹಿಣಿ ಸೆಕ್ಟರ್ 8 ರಲ್ಲಿ ಅವರು ತಮ್ಮ ಆಹಾರ ಮಳಿಗೆಯನ್ನು ಸ್ಥಾಪಿಸಿದ್ದಾರೆ.
“ಸುಮನ್ ಜೀ… ಕೆಲಸ ಕಳೆದುಕೊಂಡದ್ದಕ್ಕೆ ಕುಗ್ಗದೆ ಜೀವನದಲ್ಲಿ ಹೋರಾಡಿ ಗೆಲ್ಲುವ ಸಕಾರಾತ್ಮಕ ಮನೋಭಾವ, ಧೈರ್ಯ ಮತ್ತು ಎಂದಿಗೂ ಸೋಲದ ಮನೋಭಾವಕ್ಕೆ ಒಂದು ಸಲಾಂ” ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ. ಈ ಪೋಸ್ಟ್ ಮಹಿಳೆಯ ಧೈರ್ಯವನ್ನ, ಆತ್ಮ ವಿಶ್ವಾಸವನ್ನ ಶ್ಲಾಘಿಸುವ ಕಮೆಂಟ್ ಗಳಿಂದ ತುಂಬಿಹೋಗಿದೆ.
Teacher sells home-cooked food in Delhi after losing job.







