ತರಗತಿಯಲ್ಲೇ ನಶೆ ಏರಿಸಿಕೊಂಡು ಬಟ್ಟೆ ಬಿಚ್ಚು ಎಂದ ಶಿಕ್ಷಕ
ಹೈದರಾಬಾದ್ : ಶಾಲೆಯ ತರಗತಿಯಲ್ಲಿ ಕುಳಿತು ನಶೆ ಏರಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಕೆ. ಕೋಟೇಶ್ವರ್ ರಾವ್ ಅಮಾನತು ಆಗಿರುವ ಶಿಕ್ಷಕನಾಗಿದ್ದಾರೆ.
ಈತ ಶಾಲೆಗೆ ಪ್ರತಿ ದಿನ ಗುಂಡಾಕಿ ಬರುತ್ತಿದ್ದನಂತೆ. ಅಲ್ಲದೆ ತರಗತಿಗಳಲ್ಲೇ ಕುಳಿತು ಮದ್ಯ ಕುಡಿಯುತ್ತಾ ಅಸಭ್ಯವಾಗಿ ವರ್ತನೆ ಮಾಆಡುತ್ತಿದ್ದನಂತೆ.
ಈ ಕುರಿತಾಗಿ ಕೇಳಿದರೆ ಮಕ್ಕಳಿಗೆ ಮಕ್ಕಳ ಪಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದನಂತೆ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಬಟ್ಟೆ ಬಿಚ್ಚು ಎಂದು ರಾವ್ ಹೇಳಿದ್ದನಂತೆ.
ಈತ ಕಾಟದಿಂದ ಬೇಸತ್ತ ಮಕ್ಕಳ ಪೋಷಕರು ಕೋಟೇಶ್ವರ್ ರಾವ್ ಶಾಲೆಯಲ್ಲಿ ಕುಡಿಯುವ ದೃಶ್ಯಗಳನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಕ್ಷಕನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.