ಶಿಕ್ಷಕರೇ ಗಮನಿಸಿ… ಬಡ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ Teachers saaksha tv
ಶಿಕ್ಷಕರ ಬಡ್ತಿ ವಿಚಾರವಾಗಿ 2017ರಲ್ಲಿ ರೂಪಿಸಲಾದ ನಿಯಮಕ್ಕೆ ಶಿಕ್ಷಣ ಇಲಾಖೆ ಬದಲಾವಣೆ ತಂದಿದೆ ಎಂದು ವರದಿಯಾಗಿದೆ.
ಶಿಕ್ಷಣ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಬಿಡುಗಡೆ ಮಾಡಿದೆ. ಶಿಕ್ಷಕರ ಬಡ್ತಿ ನೀಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
ಅಲ್ಲದೇ ಆರರಿಂದ ಎಂಟನೇ ತರಗತಿ ಬೋಧಕರ ನೇಮಕಾತಿಗೆ ಅನ್ವಯವಾಗುವಂತೆ ನಿಯಮ ರೂಪಿಸಲಾಗಿದೆ.
ಹೊಸ ನಿಯಮದ ಪ್ರಕಾರ ಹೊಸ ನೇಮಕಾತಿಯೊಂದಿಗೆ ಬಡ್ತಿ ನೀಡುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
ಇನ್ನು ಈ ಹಿಂದೆ ನೇಮಕವಾಗಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 75 ಸಾವಿರ ಶಿಕ್ಷಕರು ಪದವಿ ಪೂರ್ಣಗೊಳಿಸಿದ್ದಾರೆ.
ಅವರಿಗೆ ಆರರಿಂದ ಎಂಟನೇ ತರಗತಿಗೆ ಪಾಠ ಮಾಡಲು ಬಡ್ತಿ ನೀಡಬೇಕೆಂಬ ಬೇಡಿಕೆ ಇದೆ.
ಈ ಬಡ್ತಿ ಪ್ರಮಾಣವನ್ನು ಶೇಕಡಾ 25 ರಿಂದ 33 ಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಬಡ್ತಿ ವೇಳೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗುತ್ತಿದೆ.