ಚಿತ್ರದುರ್ಗ: ಒಂದೇ ಕೊಠಡಿಯಲ್ಲಿ ಬರೋಬ್ಬರಿ 240 ವಿದ್ಯಾರ್ಥಿಗಳಿಗೆ ಪಾಠ ಮಾಡುವ ದುಸ್ಥಿತಿಯಲ್ಲಿರುವ ಕಾಲೇಜಿನ ಕರ್ಮಕಾಂಡವೊಂದು ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಸರ್ಕಾರಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠಕ್ಕೆ ಕೊಠಡಿಗಳೇ ಇಲ್ಲ ಎನ್ನುವಂತಾಗಿದೆ. ಜಿಲ್ಲೆಯ (Chitradurga) ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಬಿಎಸ್ಸಿ ನರ್ಸಿಂಗ್ ಕಾಲೇಜಿನಲ್ಲೇ ಈ ಘಟನೆ ನಡೆಯುತ್ತಿದೆ. ಇಲ್ಲಿ ಒಟ್ಟು 240 ವಿದ್ಯಾರ್ಥಿಗಳಿದ್ದಾರೆ. ಆದರೆ, ಅವರೆಲ್ಲ ಒಂದೇ ಕೊಠಡಿಯಲ್ಲಿ ಕಲಿಯುವಂತಾಗಿದೆ. ಸೂಕ್ತ ಸೌಲಭ್ಯಗಳು ಕೂಡ ಅವರಿಗೆ ಇಲ್ಲದಾಗಿದೆ.
ಶಾಸಕ ವೀರೇಂದ್ರ, ಡಿಸಿ ವೆಂಕಟೇಶ್ ಹಾಗು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ (Sharan Prakash Patil) ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರ.