ನ್ಯೂಜಿಲೆಂಡ್: ಕಿವೀಸ್ ವಿರುದ್ಧ ವೆಲ್ಲಿಂಗ್ಟನ್ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಭಾರತದ ವಿರುದ್ಧ ನ್ಯೂಜಿಲೆಂಡ್ 10 ವಿಕೆಟ್ ಗಳ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 165 ರನ್ ಗಳಿಗೆ ಸರ್ವಪತನ ಕಂಡಿದ್ದ ಟೀಮ್ ಇಂಡಿಯಾ, ಎರಡನೇ ಇನಿಂಗ್ಸ್ ನಲ್ಲೂ ಕಳಪೆ ಆಟವನ್ನ ಮುಂದುವರಿಸಿತ್ತು. ಇಂದಿನ ದಿನದಾಟವನ್ನ 4 ವಿಕೆಟ್ ನಷ್ಟಕ್ಕೆ 144ರನ್ ಗಳಿಂದ ಆರಂಭಿಸಿದ ಭಾರತ 191 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಬಳಿಕ ಕೇವಲ 9 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 1.4 ಓವರ್ ಗಳಲ್ಲಿ 9 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ನ್ಯೂಜಿಲೆಂಡ್ ತಾನಾಡಿದ 100ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತು. ಮೊದಲ ಇನಿಂಗ್ಸ್ ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ಪಡೆದ ಟಿಮ್ ಸೌಥಿ ಪ್ಲೇಯರ್ ಆಫ್ ದ ಮ್ಯಾಚ್ ಗೌರವಕ್ಕೆ ಭಾಜನರಾದ್ರು. ಇನ್ನು, ಮೊದಲ ಟೆಸ್ಟ್ ನಲ್ಲಿ ಗೆಲ್ಲುವ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆಯನ್ನ ಸಾಧಿಸಿದೆ.
ಹಠ ಬಿಡದ ಭಾರತ! ಪಾಕಿಸ್ತಾನ್ ದಿಂದಲೇ ಕೈ ತಪ್ಪುತ್ತಾ ಚಾಂಪಿಯನ್ಸ್ ಟ್ರೋಫಿ?
ಚಾಂಪಿಯನ್ಸ್ ಟ್ರೋಫಿ ಫೆ. 19 ರಿಂದ ಮಾರ್ಚ್ 9ರ ವರೆಗೆ ನಡೆಯಲಿದ್ದು, ಪಾಕ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಭಾರತ ಪಾಕಿಸ್ತಾನ್ ಕ್ಕೆ ಭದ್ರತೆಯ ದೃಷ್ಟಿಯಿಂದ ಹೋಗುವುದಿಲ್ಲ ಎಂದು...