Team India Creates World Record: ಏಕದಿನ ಕ್ರಿಕೆಟ್ ನಲ್ಲಿ ಭಾರತ ವಿಶ್ವದಾಖಲೆ
ಪೋರ್ಟ್ ಆಫ್ ಸ್ಪೇಯಿನ್ ವೇದಿಕೆಯಾಗಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ವಿಕೆಟ್ ಗಳೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಕೊನೆಯವರೆಗೂ ಅತ್ಯಂತ ರೋಚಕತೆಯಿಂದ ಸಾಗಿದ ಈ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಭಾರತಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ಓವರ್ ನಲ್ಲಿ ಟೀಂ ಇಂಡಿಯಾ ಗೆಲ್ಲಲು ಎಂಟು ರನ್ ಗಳ ಅವಶ್ಯಕತೆ ಇತ್ತು. ಮೊದಲ ಮೂರು ಎಸೆತಗಳಲ್ಲಿ ಕೇವಲ ಎರಡು ರನ್ ಗಳು ಮಾತ್ರ ಲಭಿಸಿದ್ದವು.
ಆದ್ರೆ ನಾಲ್ಕನೇ ಎಸೆತದಲ್ಲಿ ಭಾರಿ ಸಿಕ್ಸರ್ ಬಾರಿಸಿದ ಅಕ್ಷರ್ ಪಟೇಲ್ ಭಾರತಕ್ಕೆ ಗೆಲುವು ತಂದುಕೊಟ್ಟರು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಒನ್ನೊಂದು ಪಂದ್ಯ ಬಾಕಿ ಉಳಿದಿರುವಂತೆ ಟೀಂ ಇಂಡಿಯಾ 2-0 ಅಂತರದೊಂದಿಗೆ ಸರಣಿಯನ್ನು ಗೆದ್ದುಕೊಂಡಿದೆ.
ಇದರೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆಯನ್ನು ಭಾರತ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ.
ಒಂದೇ ತಂಡದ ವಿರುದ್ಧ ಅತ್ಯಧಿಕ ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಗೆದ್ದ ತಂಡವಾಗಿ ಟೀಂ ಇಂಡಿಯಾ ದಾಖಲೆ ನಿರ್ಮಿಸಿದೆ.
2006 ರಿಂದ ಇಲ್ಲಿಯವರೆಗೂ ವಿಂಡೀಸ್ ಮೇಲೆ ಟೀಂ ಇಂಡಿಯಾ ಸತತವಾಗಿ 12 ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ.
ಇನ್ನು ಜಿಂಬಾಬೆ ವಿರುದ್ಧ ಸತತ 11 ಏಕದಿನ ಸರಣಿಗಳನ್ನ ಗೆಲ್ಲುವ ಮೂಲಕ ಪಾಕಿಸ್ತಾನ ತಂಡ ಎರಡನೇ ಸ್ಥಾನದಲ್ಲಿದೆ.








