ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧದಲ್ಲೇ ಸ್ಥಗಿತಗೊಳ್ಳುತ್ತಿದ್ದಂತೆ ಎಲ್ಲರ ಗಮನ ಈಗ ಇಂಗ್ಲೆಂಡ್ ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನತ್ತ ನೆಟ್ಟಿದೆ. ಅದರಲ್ಲೂ ಚೊಚ್ಚಲ ಬಾರಿಗೆ ನಡೆಯುತ್ತಿರುವ ಈ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಯಾರು ಗೆಲ್ತಾರೇ ಅನ್ನೋ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಯಾಕಂದ್ರೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಮುಖಾಮುಖಿ ಆಗುತ್ತಿರೋದು ಎರಡು ಮದಜಗಗಳು..!
ಹೌದು..! ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲಿ ಬಲಿಷ್ಠವಾಗಿರುವ ಟೀಂ ಇಂಡಿಯಾ, ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳಲ್ಲೂ ಮ್ಯಾಚ್ ಟರ್ನ್ ಮಾಡೋ ಆಟಗಾರರ ದಂಡೇ ಇದ್ದು, ಫೈನಲ್ ಪಂದ್ಯ ಯಾವುದೇ ಆಕ್ಷನ್ ಸಿನಿಮಾಗೆ ಕಡಿಮೆ ಇರೋದಿಲ್ಲ.
ಇನ್ನು ಈ ಫೈನಲ್ ಪಂದ್ಯಕ್ಕಾಗಿ ಬಿಸಿಸಿಐ ಈಗಾಗಲೇ ಕೊಹ್ಲಿ ನೇತೃತ್ವದ ಬಲಿಷ್ಠ ತಂಡವನ್ನ ಪ್ರಕಟ ಮಾಡಿದೆ. ಈ ತಂಡ ಖಂಡಿತವಾಗಿಯೂ ಪ್ರಶಸ್ತಿ ಗೆದ್ದೇಗೆಲ್ಲುತ್ತೆ ಅನ್ನುತ್ತಿದ್ದಾರೆ ಹಲವಾರು ಕ್ರಿಕೆಟ್ ದಿಗ್ಗಜರು.
ಸದ್ಯ ಪ್ರಕಟವಾಗಿರುವ ತಂಡ ಎಲ್ಲಾ ವಿಭಾಗದಲ್ಲೂ ಸಾಲಿಡ್ ಆಗಿದೆ. ನ್ಯೂಜಿಲೆಂಡ್ ತಂಡಕ್ಕೆ ಹೋಲಿಕೆ ಮಾಡಿದ್ರೆ ನಾವು ಬಲಿಷ್ಠವಾಗಿಯೇ ಕಾಣುತ್ತಿದ್ದೇವೆ. ಮುಖ್ಯವಾಗಿ ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ರಿಷಭ್ ಪಂತ್ ರಂತಹ ಮ್ಯಾಚ್ ವಿನ್ನರ್ ಗಳಿದ್ದಾರೆಅ. ಇದರಲ್ಲಿ ಒಬ್ಬರು ಕ್ರೀಸ್ ನಲ್ಲಿ ಕಚ್ಚಿ ನಿಂತ್ರೆ ಎಲ್ಲಿ ಎದುರಾಳಿಗಳ ಮಾರಣಹೋಮ ಗ್ಯಾರಂಟಿ. ಇದರ ಜೊತೆಗೆ ಕೆ ಎಲ್. ರಾಹುಲ್ ತಂಡದಲ್ಲಿ ಸೇರ್ಪಡೆ ಆದ್ರೆ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ.
ಇನ್ನು ಬೌಲಿಂಗ್ ಬಗ್ಗೆ ಮಾತನಾಡಿದರೆ, ಬುಮ್ರಾ, ಇಶಾಂತ್ ಶರ್ಮಾ, ಶಮಿಯವರನ್ನು ಹೊಂದಿದ್ದೇವೆ. ಒಂದು ವೇಳೆ ಅವರಲ್ಲಿ ಯಾರಾದರೂ ಸರಿಹೊಂದುವುದಿಲ್ಲ ಎನಿಸಿದರೆ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಇದ್ದಾರೆ. ಈ ಎಲ್ಲಾ ಬೌಲರ್ ಗಳು ತಮ್ಮ ಜವಾಬ್ದಾರಿ ಅರಿತು ಬೌಲಿಂಗ್ ಮಾಡಿದ್ರೆ ತಂಡಕ್ಕೆ ಗೆಲುವು ಕಟ್ಟಿಟ್ಟಬುತ್ತಿ.
ಇನ್ನು ಆಲ್ ರೌಂಡರ್ ಗಳ ವಿಭಾಗದಲ್ಲಿ ಸರ್ ರವೀಂದ್ರ ಜಡೇಜಾ ತಂಡದ ಟ್ರಂಪ್ ಕಾರ್ಡ್ ಪ್ಲೇಯರ್. ವಿದ್ವಂಸಕ ಬ್ಯಾಟಿಂಗ್, ಚಾಣಾಕ್ಷ ಬೌಲಿಂಗ್, ಮಿಂಚಿನ ಫೀಲ್ಡಿಂಗ್ ಮಾಡಬಲ್ಲ ಆಟಗಾರ ತಂಡದಲ್ಲಿ ಇರೋದು ತಂಡದ ಪ್ಲಸ್ ಪಾಯಿಂಟ್. ಇವರ ಜೊತೆ ಅಶ್ವಿನ್ ಕೂಡ ಆಡಲಿದ್ದಾರೆ. ಒಟ್ಟಾರೆ ತಂಡ ಮೂರು ವಿಭಾಗದಲ್ಲಿ ತುಂಬಾ ಸ್ಟ್ರಾಂಗ್ ಆಗಿದೆ.
ಒಟ್ಟಾರೆ ಭಾರತ ಕ್ರಿಕೆಟ್ ತಂಡ ಮೂರು ವಿಭಾಗದಲ್ಲಿ ಬಲಿಷ್ಟವಾಗಿದ್ದು, ಎಲ್ಲಾ ಅಂದುಕೊಂಡಂತೆ ಆದ್ರೆ ನಾವು ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಗೋದ್ರಲ್ಲಿ ಡೌಟೇ ಇಲ್ಲ.










