ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನ್ಯೂಜಿಲೆಂಡ್ ವಿರುದ್ಧವೂ ಸೋತ ಟೀಮ್ ಇಂಡಿಯಾ – ಸೆಮಿಫೈನಲ್ ಆಸೆ ಬಹುತೇಕ ಖತಂ

Mahesh M Dhandu by Mahesh M Dhandu
November 1, 2021
in Newsbeat, Sports, ಕ್ರೀಡೆ
Team India saaksha TV
Share on FacebookShare on TwitterShare on WhatsappShare on Telegram

ನ್ಯೂಜಿಲೆಂಡ್ ವಿರುದ್ಧವೂ ಸೋತ ಟೀಮ್ ಇಂಡಿಯಾ – ಸೆಮಿಫೈನಲ್ ಆಸೆ ಬಹುತೇಕ ಖತಂ

ದುಬೈ ಮೈದಾನದಲ್ಲಿ ಟೀಮ್ ಇಂಡಿಯಾ ಮತ್ತೆ ಮುಗ್ಗರಿಸಿತು. ಸತತ 2ನೇ ಪಂದ್ಯದಲ್ಲೂ ವಿರಾಟ್ ಬಳಗ ಅಂದುಕೊಂಡಿದ್ದು ಏನೂ ನಡೆಯಲಿಲ್ಲ. ಬ್ಯಾಟಿಂಗ್ ಮತ್ತೊಮ್ಮೆ ಕೈ ಕೊಟ್ಟರೆ, ಬೌಲಿಂಗ್ನಲ್ಲೂ ಮಿಂಚಿನ ಆಟ ಬರಲಿಲ್ಲ. ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಸೋಲುಂಡ ಟೀಮ್ ಇಂಡಿಯಾ ಈಗ ಸೆಮಿಫೈನಲ್ ಆಸೆಯನ್ನು ಬಹುತೇಕವಾಗಿ ಕೈ ಬಿಟ್ಟಿದೆ.

Related posts

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

August 7, 2026
ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

August 7, 2026

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಟಾಸ್ ಟೀಮ್ ಇಂಡಿಯಾದ ಕೈ ಹಿಡಿಯಲಿಲ್ಲ. ಟಾಸ್ ಗೆದ್ದ ಕಿವೀಸ್ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಇಳಿಸಿತು. ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಇಶನ್ ಕಿಶನ್ ಗಳಿಕೆ ಕೇವಲ 4 ರನ್. ರಾಹುಲ್ ಗಳಿಸಿದ್ದು 14 ರನ್. ರೋಹಿತ್ ಶರ್ಮಾ ಕೊಡುಗೆ 14 ರನ್. ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಬ್ಯಾಟ್ ಕೂಡ ಸದ್ದು ಮಾಡದೆ 9 ರನ್ಗಳಿಗೆ ಸುಸ್ತಾಗಿತ್ತು. ರನ್ಗಳಿಸಲು ಪರದಾಡಿದ್ದ ರಿಷಬ್ ಪಂತ್ ಕೊಡುಗೆಯಾಗಿ ನೀಡಿದ್ದು 12 ರನ್ ಮಾತ್ರ, ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ. ಪಾಂಡ್ಯ 24 ಎಸೆತಗಳಲ್ಲಿ 23 ರನ್ಗಳಿಸಿ ಔಟಾದರು. ಶಾದೂಲ್ ಶೂನ್ಯ ಸುತ್ತಿದರು. ಆದರೆ ಜಡೇಜಾ 19 ಎಸೆತಗಳಲ್ಲಿ ಅಜೇಯ 26 ರನ್ ಸಿಡಿಸಿದ್ದು ತಂಡವನ್ನು ನೂರರ ಗಡಿ ದಾಟುವಂತೆ ಮಾಡಿತು. 20 ಓವರುಗಳಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 110 ರನ್ಗಳಿಸಿತ್ತು. ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದು ಕಿವೀಸ್ ಬೌಲಿಂಗ್ನ ಬೆಸ್ಟ್ ಫರ್ಫಾಮರ್ ಆಗಿ ಕಾಣಿಸಿಕೊಂಡರು.

Team India saaksha TV
ಈಸೀ ಟಾರ್ಗೆಟ್ ಅನ್ನು ಬೆನ್ನು ಹತ್ತುಲು ಶುರುಮಾಡಿದ ಕಿವೀಸ್ ಉತ್ತಮ ಆರಂಭ ಪಡೆಯಿತು. ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಒತ್ತಡ ಹೇರಿದ್ರು. ಗಪ್ಟಿಲ್ 20 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಡೆರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಎಲ್ಲಾ ಲೆಕ್ಕಾಚಾರ ಬದಲಿಸಿದರು. ಮಿಚೆಲ್ ಸ್ಪೋಟಕ ಆಟ ಆಡಿ 3 ಸಿಕ್ಸರ್ ಮತ್ತು 4 ಫೋರ್ಗಳ ನೆರವಿನಿಂದ 49 ರನ್ಗಳಿಸಿ ಔಟಾದರು.
ಕೇನ್ ವಿಲಿಯಮ್ಸನ್ ಮತ್ತು ಡೆವೊನ್ ಕಾನ್ವೆ ನ್ಯೂಜಿಲೆಂಡ್ ಗೆಲುವಿಗೆ ಬೇಕಾದ ಕೆಲಸ ಮುಗಿಸಿದರು. ಕಿವೀಸ್ 14.3 ಓವರುಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ವಿಲಿಯಮ್ಸನ್ ಅಜೇಯ 33 ರನ್ಗಳಿಸಿದರು. ಈ ಭರ್ಜರಿ ಗೆಲುವಿನ ಜೊತೆ ಕಿವೀಸ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಂಡಿತು.

Tags: #Saaksha TVindianewzealandt-20 world cup
ShareTweetSendShare
Join us on:

Related Posts

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

by Shwetha
August 7, 2026
0

ಗಣೇಶೋತ್ಸವದ ವೇಳೆ ಪಿಒಪಿ (Plaster of Paris) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಸ್ಥಾಪನೆ ಮತ್ತು ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಸಚಿವ ಈಶ್ವರ...

ಭಾರತ ಹಿಂದೂ ರಾಷ್ಟ್ರವಾದರೆ ದಮನಿತರು ಮತ್ತೆ ಗುಲಾಮರಾಗಬೇಕಾಗುತ್ತದೆ ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ

ಭಾರತ ಹಿಂದೂ ರಾಷ್ಟ್ರವಾದರೆ ದಮನಿತರು ಮತ್ತೆ ಗುಲಾಮರಾಗಬೇಕಾಗುತ್ತದೆ ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ

by Shwetha
August 7, 2026
0

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಯತ್ನವು ಈ ದೇಶಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಲಿದೆ. ಇದು ಕೇವಲ ಧಾರ್ಮಿಕ ಬದಲಾವಣೆಯಲ್ಲ, ಬದಲಾಗಿ ಶೋಷಣೆಯ ಹಳೆಯ ವ್ಯವಸ್ಥೆಯನ್ನು ಮರಳಿ ತರುವ...

ಸಭಾಪತಿ ಸ್ಥಾನಕ್ಕೆ ರಾಜೀನಾಮೆಗೆ ಬಸವರಾಜ ಹೊರಟ್ಟಿ ಒಪ್ಪಿಗೆ

ಸಭಾಪತಿ ಸ್ಥಾನಕ್ಕೆ ರಾಜೀನಾಮೆಗೆ ಬಸವರಾಜ ಹೊರಟ್ಟಿ ಒಪ್ಪಿಗೆ

by Shwetha
August 7, 2026
0

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಒಪ್ಪಿರುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...

ಚಿತಾಭಸ್ಮ ಪಡೆಯಲು ನಮಗೆ ಟೈಮಿಲ್ಲ- 5001 ರೂಪಾಯಿ ಕೊಟ್ಟು ಕೈತೊಳೆದುಕೊಂಡ ಮಗಳು : ಹೆತ್ತ ತಂದೆಯ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಕಟುಕ ಹೆಣ್ಣು ಮಕ್ಕಳು

ಚಿತಾಭಸ್ಮ ಪಡೆಯಲು ನಮಗೆ ಟೈಮಿಲ್ಲ- 5001 ರೂಪಾಯಿ ಕೊಟ್ಟು ಕೈತೊಳೆದುಕೊಂಡ ಮಗಳು : ಹೆತ್ತ ತಂದೆಯ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಕಟುಕ ಹೆಣ್ಣು ಮಕ್ಕಳು

by Shwetha
August 7, 2026
0

ಸೋನಿಪತ್: ಮನುಷ್ಯ ಸಂಬಂಧಗಳು ಎಷ್ಟು ಯಾಂತ್ರಿಕವಾಗಿವೆ ಎನ್ನುವುದಕ್ಕೆ ಹರ್ಯಾಣದ ಸೋನಿಪತ್‌ನಲ್ಲಿ ನಡೆದ ಈ ಕರುಣಾಜನಕ ಘಟನೆಯೇ ಸಾಕ್ಷಿ. ತಮ್ಮ ಇಡೀ ಜೀವನವನ್ನೇ ಮಕ್ಕಳ ಭವಿಷ್ಯಕ್ಕಾಗಿ ಮುಡಿಪಾಗಿಟ್ಟ ತಂದೆಯೊಬ್ಬರು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram