Team India | ಪ್ಲೇಯಿಂಗ್ 11 ನಲ್ಲಿ ಯಾರಿಗೆ ಚಾನ್ಸ್ – ಡಿಕೆ ಅಥವಾ ಪಂತ್ !
ಟಿ 20 ವಿಶ್ವಕಪ್ 2022 ಮೆಗಾ ಸಮರಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ.
ಜಿಲಾಂಗ್ ವೇದಿಕೆಯಾಗಿ ಅಕ್ಟೋಬರ್ 16 ರಂದು ಶ್ರೀಲಂಕಾ – ನಮಿಬಿಯಾ ಮ್ಯಾಚ್ ನೊಂದಿಗೆ ಮೆಗಾ ಈವೆಂಟ್ ಶುರುವಾಗಲಿದೆ.
ಇನ್ನು ಟೀಂ ಇಂಡಿಯಾದ ವಿಷಯಕ್ಕೆ ಬಂದರೇ ರೋಹಿತ್ ಶರ್ಮಾ ಸೇನೆ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಮೆಲ್ ಬಾರ್ನ್ ವೇದಿಕೆಯಾಗಿ ಪಾಕಿಸ್ತಾನ ತಂಡದ ವಿರುದ್ಧ ಸೆಣಸಲಿದೆ.
ಇದಕ್ಕೂ ಮುನ್ನಾ ಟೀಂ ಇಂಡಿಯಾ ಸದ್ಯ ಎರಡು ಪ್ರಾಕ್ಟೀಸ್ ಮ್ಯಾಚ್ ಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಕಂಡಿದ್ದರೇ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ.
ಈ ನಡುವೆ ಪಾಕ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.
ಅದರಲ್ಲೂ ಮುಖ್ಯವಾಗಿ ವಿಕೆಟ್ ಕೀಪರ್ ಗಳ ಕೋಟಾದಲ್ಲಿ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ತಂಡದಲ್ಲಿದ್ದು, ಇವರಲ್ಲಿ ಯಾರು ಪ್ಲೇಯಿಂಗ್ ನಲ್ಲಿ ಆಡಲಿದ್ದಾರೆ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಪ್ರಶ್ನೆಯಾಗಿದೆ.
ಅಂದಹಾಗೆ ಪಾಕ್ ವಿರುದ್ಧ ಪಂದ್ಯದಲ್ಲಿ ರಿಷಬ್ ಪಂತ್ ಗೆ ಅವಕಾಶಗಳು ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸದ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಪಂತ್ ನಿರಾಸೆ ಅನುಭವಿಸಿದರು. ಅವರು ಎರಡೂ ಪ್ರಾಕ್ಟೀಸ್ ಪಂದ್ಯಗಳಿಂದ ಕೇವಲ 18 ರನ್ ಗಳಿಸಿದ್ದಾರೆ.
ಹೀಗಾಗಿ ಸದ್ಯ ಸೂಪರ್ ಫಾರ್ಮ್ ನಲ್ಲಿರುವ ದಿನೇಶ್ ಕಾರ್ತಿಕ್ ಮೇಲೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ.
ಅದರಲ್ಲು ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದರಂತೆ ತಮ್ಮ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದಾರೆ.
ಈ ವರ್ಷ ಟಿ 20 ಯಲ್ಲಿ 181 ಎಸೆತಗಳನ್ನು ಎದುರಿಸಿರುವ ಕಾರ್ತಿಕ್, 150.82ರ ಸ್ಟ್ರೈಕ್ ರೇಟ್ ನಲ್ಲಿ 273 ರನ್ ಗಳಿಸಿದ್ದಾರೆ. ಪಂತ್ 17 ಇನ್ನಿಂಗ್ಸ್ ಗಳಲ್ಲಿ 136.84ರ ಸ್ಟ್ರೈಕ್ ನಲ್ಲಿ 338 ರನ್ ಗಳಿಸಿದ್ದಾರೆ.
ಅಂಕಿಅಂಶಗಳು ಕೂಡ ದಿನೇಶ್ ಕಾರ್ತಿಕ್ ಅವರಿಗೆ ಅನುಕೂಲಕರವಾಗಿದ್ದು, ಅಂತಿಮ ತಂಡದಲ್ಲಿ ಡಿಕೆಗೆ ಅವಕಾಶಗಳು ಸಿಗುವ ಸಾಧ್ಯತೆಗಳಿವೆ.
ಟಿ 20 ವಿಶ್ವಕಪ್ ಗೆ ಭಾರತ ತಂಡ
ರೋಹಿತ್ ಶರ್ಮಾ, ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್, ಮೊಹ್ಮದ್ ಶಮಿ








