ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ.. ವಿರಾಟ್ ನಾಯಕ… ರಾಹುಲ್ ಉಪನಾಯಕ..!
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.
ತಂಡದಲ್ಲಿ ಹೆಚ್ಚೆನು ಬದಲಾವಣೆಯಾಗಿಲ್ಲ. ಶುಬ್ಮನ್ ಗಿಲ್ ತಂಡ, ಮಯಾಂಕ್ ತಂಡದಲ್ಲಿದ್ದಾರೆ. ಹಾಗೇ ನವದೀಪ್ ಸೈನಿಗೆ ಅವಕಾಶವನ್ನು ನೀಡಲಾಗಿದೆ.
ಇನ್ನುಳಿದಂತೆ ರೋಹಿತ್ ಶರ್ಮಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ರೋಹಿತ್ ಶರ್ಮಾ ಅವರು ಕಳೆದ ಮೂರು ಸರಣಿಗಳಲ್ಲಿ ತಂಡದಿಂದ ಹೊರಗಿದಿದ್ದಾರೆ.
ಇನ್ನೊಂದೆಡೆ ಕೆ.ಎಲ್. ರಾಹುಲ್ ಅವರಿಗೆ ವಿಕೆಟ್ ಕೀಪರ್ ಜವಾಬ್ದಾರಿಯ ಜೊತೆಗೆ ಉಪನಾಯಕನ ಉಸ್ತುವಾರಿಯನ್ನು ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ನವೆಂಬರ್ 27 ರಿಂದ ಆರಂಭವಾಗಲಿದೆ.
ನವೆಂಬರ್ 27 – ಮೊದಲ ಏಕದಿನ ಪಂದ್ಯ-ಸಿಡ್ನಿ
ನವೆಂಬರ್ 29- ಎರಡನೇ ಏಕದಿನ ಪಂದ್ಯ – ಸಿಡ್ನಿ
ಡಿಸೆಂಬರ್ 1- ಓವಲ್ ಮೈದಾನ

ಟೀಮ್ ಇಂಡಿಯಾದ ಏಕದಿನ ತಂಡ
ಬ್ಯಾಟ್ಸ್ ಮೆನ್ ಗಳು
ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ/ ವಿಕೆಟ್ ಕೀಪರ್), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಮಯಾಂಕ್ ಅಗರ್, ಹಾರ್ದಿಕ್ ಪಾಂಡ್ಯ (ಆಲ್ ರೌಂಡರ್)
ಸ್ಪಿನ್ನರ್ ಗಳು
ರವೀಂದ್ರ ಜಡೇಜಾ (ಆಲ್ ರೌಂಡರ್) ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್,
ಬೌಲರ್ ಗಳು
ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ, ನವದೀಪ್ ಶೈನಿ, ಶಾರ್ದೂಲ್ ಥಾಕೂರ್.








