ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಸಾಧಿಸಿದ ರೆಕಾರ್ಡ್ ಗಳೇಷ್ಟು..? Africa saaksha tv
ದಕ್ಷಿಣ ಆಫ್ರಿಕಾ ವಿರುದ್ಧ ನಡೆಲಿರುವ ಟೆಸ್ಟ್ ಸರಣಿಗೆ ಭಾರತ ಸಿದ್ಧವಾಗುತ್ತಿದೆ. ಇಂದು ಸೆಂಚೂರಿಯನ್ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ.
ಮೊದಲ ಟೆಸ್ಟ್ ಪಂದ್ಯ ಗೆದ್ದು ಸಿರೀಸ್ ನಲ್ಲಿ ಶುಭಾರಂಭ ಮಾಡಲು ಕೊಹ್ಲಿ ಸೇನೆ ಸಜ್ಜಾಗಿದೆ. ಇದಲ್ಲದೇ ಈವರೆಗೂ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.
ಹೀಗಾಗಿ ಮೊದಲ ಪಂದ್ಯದಿಂದಲೇ ಸರಣಿ ಗೆಲ್ಲುವತ್ತ ಗಮನ ಹರಿಸಲು ಭಾರತ ಸಜ್ಜಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಫ್ರಿಕಾ ನೆಲದಲ್ಲಿ ಭಾರತ ಸಾಧಿಸಿದ ರಿಕಾರ್ಡ್ ಗಳತ್ತ ಒಂದು ಲುಕ್ಕಾಕೋಣ..
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಸಾಧಿಸಿದ ರಿಕಾರ್ಡ್ಸ್
ಈವರೆಗೂ ಏಳು ಬಾರಿ ದಕ್ಷಿಣ ಆಫ್ರಿಕಾಗೆ ದಂಡೆತ್ತಿ ಬಂದಿರುವ ಟೀಂ ಇಂಡಿಯಾ ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಿದೆ.
ಇದರಲ್ಲಿ 10 ಪಂದ್ಯಗಳಲ್ಲಿ ಸೋತು. ಏಳು ಪಂದ್ಯಗಳನ್ನ ಡ್ರಾ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಜಯ ತಂದುಕೊಟ್ಟಿದ್ದು, ರಾಹುಲ್ ದ್ರಾವಿಡ್. ಆ ಬಳಿಕ 2018ರಲ್ಲಿ ಎಂ.ಎಸ್.ಧೋನಿ. 2018ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಫ್ರಿಕಾ ನೆಲದಲ್ಲಿ ಭಾರತ ಗೆದ್ದಿದೆ.









