ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ವಿರಾಟ್ ಕೊಹ್ಲಿ ಬಳಗ
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಗೆ ವಿರಾಟ್ ಪಡೆಯನ್ನು ಆಯ್ಕೆ ಮಾಡಲಾಗಿದೆ.
ಟೀಮ್ ಇಂಡಿಯಾದಲ್ಲಿ ವರುಣ್ ಚಕ್ರವರ್ತಿಗೆ ಅವಕಾಶವನ್ನು ನೀಡಲಾಗಿದೆ. ಇನ್ನುಳಿದಂತೆ ಸಂಜು ಸಾಮ್ಸನ್ ಅವರಿಗೆ ಕೊನೆಗೂ ಚುಟುಕು ಕ್ರಿಕೆಟ್ ನಲ್ಲಿ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಇನ್ನುಳಿದಂತೆ ಹೊಸ ಮುಖಗಳಿಗೆ ಅವಕಾಶ ಸಿಕ್ಕಿಲ್ಲ. ನವದೀಪ್ ಸೈನಿ ಮತ್ತು ದೀಪಕ್ ಚಾಹರ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದೆಡೆ, ರೋಹಿತ್ ಶರ್ಮಾ ಅವರನ್ನು ಗಾಯದಿಂದ ಕೈಬಿಡಲಾಗಿದೆ. ಹಾಗೇ ರಿಷಬ್ ಪಂತ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.
ತಂಡದ ಹೊಸ ಮುಖ ಅಂದ್ರೆ ವರುಣ್ ಚಕ್ರವರ್ತಿ. ವರುಣ್ ಚಕ್ರವರ್ತಿ ಅವರು ತಮಿಳುನಾಡಿನ ಸ್ಪಿನ್ನರ್. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವರುಣ್ ಚಕ್ರವರ್ತಿ ಅವರು ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ.
ಇನ್ನೊಂದೆಡೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಕೆ.ಎಲ್. ರಾಹುಲ್ ಅವರು ಉಪನಾಯಕನಾಗಿ ನೇಮಕಗೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಯು ಡಿಸೆಂಬರ್ 4ರಿಂದ ಶುರುವಾಗಲಿದೆ.
ಮೊದಲ ಟಿ-ಟ್ವೆಂಟಿ ಪಂದ್ಯ- ಡಿಸೆಂಬರ್ -4 – ಓವಲ್.
ಎರಡನೇ ಟಿ-ಟ್ವೆಂಟಿ ಪಂದ್ಯ- ಡಿಸೆಂಬರ್ 6-ಸಿಡ್ನಿ
ಮೂರನೇ ಟಿ-ಟ್ವೆಂಟಿ ಪಂದ್ಯ- ಡಿಸೆಂಬರ್ 8- ಸಿಡ್ನಿ
ಟಿ-ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾ
ಬ್ಯಾಟ್ಸ್ ಮೆನ್ ಗಳು
ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ/ ವಿಕೆಟ್ ಕೀಪರ್), ಶಿಖರ್ ಧವನ್, ಮಯಾಂಕ್ ಅಗರ್ ವಾಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ (ಆಲ್ ರೌಂಡರ್) ಸಂಜು ಸಾಮ್ಸನ್ (ವಿಕೆಟ್ ಕೀಪರ್)
ಸ್ಪಿನ್ನರ್ ಗಳು
ರವೀಂದ್ರ ಜಡೇಜಾ (ಆಲ್ ರೌಂಡರ್)
ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ
ವೇಗದ ಬೌಲರ್ ಗಳು
ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಾಹರ್.








