Team India | ಯಂಗ್ ಇಂಡಿಯಾಗೆ ಕಿಂಗ್ ಕೊಹ್ಲಿ ಟಿಪ್ಸ್ team-india-virat-kohli-interacts- with-indian-u19-team
ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತದ ಯುವ ಆಟಗಾರರಿಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಕೊಹ್ಲಿ ಭಾರತದ ಯುವ ಆಟಗಾರರೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದಾರೆ. ವಿರಾಟ್ ನಾಯಕತ್ವದಲ್ಲಿ, 2008 ರಲ್ಲಿ ಭಾರತ ತಂಡ ಅಂಡರ್-19 ವಿಶ್ವಕಪ್ ಗೆದ್ದಿತ್ತು.
ಇತ್ತ ಭಾರತ ಕಿರಿಯ ತಂಡದ ಪ್ಲೇಯರ್ಗಳಾದ ಕೌಶಲ್ ತಾಂಬೆ ಮತ್ತು ರಾವ್ಜರ್ಧನ್ ಹಂಗರ್ಗೇಕರ್ ವಿರಾಟ್ ಕೊಹ್ಲಿ ಜೊತೆಗಿನ ಸಂಭಾಷಣೆಯ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಫೈನಲ್ ಪಂದ್ಯಕ್ಕೂ ಮುನ್ನ ಕಿಂಗ್ ಕೊಹ್ಲಿ ನಮಗೆ ಕೆಲವು ಅಮೂಲ್ಯ ಸಲಹೆಗಳು ಮತ್ತು ಸೂಚನೆಗಳನ್ನು ನೀಡಿದ್ದಾರೆ ” ಎಂದು ಕೌಶಲ್ ತಾಂಬೆ ಬರೆದುಕೊಂಡಿದ್ದಾರೆ.
“ವಿರಾಟ್ ಅಣ್ಣಾ… ನಿಮ್ಮೊಂದಿಗೆ ಮಾತನಾಡದ್ದು ತುಂಬಾ ಸಂತೋಷವಾಗಿದೆ. ನಾನು ನಿಮ್ಮಿಂದ ಜೀವನ ಮತ್ತು ಕ್ರಿಕೆಟ್ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಕಲಿತಿದ್ದೇನೆ. ಅವು ಮುಂದಿನ ವರ್ಷಗಳಲ್ಲಿ ನಾನು ಉತ್ತಮವಾಗಲು ಸಹಾಯ ಮಾಡುತ್ತವೆ” ಎಂದು ಹಂಗೇಕರ್ ಬರೆದಿದ್ದಾರೆ.
ಅಂದಹಾಗೆ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸತತ ನಾಲ್ಕನೇ ಬಾರಿ ಫೈನಲ್ ತಲುಪಿದೆ. ಭಾರತ ಅಂಡರ್-19 ತಂಡ ನಾಲ್ಕು ಬಾರಿ ವಿಶ್ವಕಪ್ ಗೆದ್ದಿದೆ.
ಭಾರತ ತಂಡವು 2000 (ಕ್ಯಾಪ್ಟನ್ ಮೊಹಮ್ಮದ್ ಕೈಫ್), 2008 (ಕ್ಯಾಪ್ಟನ್ ವಿರಾಟ್ ಕೊಹ್ಲಿ), 2012 (ಕ್ಯಾಪ್ಟನ್ ಉನ್ಮುಕ್ತ್ ಚಂದ್), 2018 (ಕ್ಯಾಪ್ಟನ್ ಪೃಥ್ವಿ ಶಾ) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇನ್ನೂ ಮೂರು ಬಾರಿ (2006, 2016, 2020) ಫೈನಲ್ನಲ್ಲಿ ಸೋತು ರನ್ನರ್ ಅಪ್ ಆಗಿದೆ.