Team India | ಕ್ರಿಕೆಟ್ ನ ನಯಾ ಜೋಕರ್ಸ್ “ಟೀಂ ಇಂಡಿಯಾ”
ಕ್ರಿಕೆಟ್ ನಲ್ಲಿ ಮಹತ್ವದ ಟೂರ್ನಿಯಲ್ಲಿರುವ ಒತ್ತಡವನ್ನು ಭರಿಸಲಾಗದೇ ಪಂದ್ಯವನ್ನು ಕೈ ಚೆಲ್ಲುವ ಟೀಂ ಗಳನ್ನು ಜೋಕರ್ಸ್ ಅಂತಾ ಕರೆಯಲಾಗುತ್ತದೆ. ಈಗಾಗಲೇ ಜೋಕರ್ಸ್ ಅನ್ನೋ ಮುದ್ರೆ ಕ್ರಿಕೆಟ್ ನಲ್ಲಿ ಸೌಥ್ ಆಫ್ರಿಕಾ ತಂಡಕ್ಕಿದೆ. ಐಸಿಸಿ ಟೂರ್ನಿಗಳಲ್ಲಿ ಆರಂಭದಿಂದಲೂ ಸತತ ಗೆಲುವುಗಳನ್ನು ಸಾಧಿಸುವ ದಕ್ಷಿಣ ಆಫ್ರಿಕಾ ತಂಡ ಪ್ರಮುಖ ಪಂದ್ಯಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸೋಲು ಅನುಭವಿಸುತ್ತದೆ.
ತಂಡ ಎಷ್ಟೇ ಬಲಿಷ್ಠವಾಗಿದ್ದರೂ ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೂ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ಕೂಡ ವಿಶ್ವಕಪ್ ನಲ್ಲಿ ಸೌಥ್ ಆಫ್ರಿಕಾ ಅದೇ ಪರಿಸ್ಥಿತಿಯನ್ನು ಎದುರಿಸಿತು. ಗ್ರೂಪ್ 2 ರಲ್ಲಿದ್ದ ಸೌಥ್ ಆಫ್ರಿಕಾ ತಂಡ ನೆದರ್ ಲ್ಯಾಂಡ್ ಮೇಲೆ ಗೆದ್ದು ಸೆಮೀಸ್ ಪ್ರವೇಶ ಮಾಡಬಹುದಿತ್ತು. ಆದ್ರೆ ನೆದರ್ ಲ್ಯಾಂಡ್ ವಿರುದ್ಧ ಆಪ್ರಿಕಾ ತಂಡ ಸೋಲು ಕಂಡು ಟೂರ್ನಿಯಿಂದ ಹೊರಬಿತ್ತು.
ಇದೀಗ ಟೀಂ ಇಂಡಿಯಾ ಕೂಡ ದಕ್ಷಿಣ ಆಫ್ರಿಕಾದ ಹಾದಿಯಲ್ಲಿ ನಡೆಯುತ್ತಿದೆ. ಯಾಕಂದರೆ ಇಂಗ್ಲೆಂಡ್ ವಿರುದ್ದದ ಸಮೀಸ್ ನಲ್ಲಿ ಯಾವುದೇ ಪ್ರತಿರೋಧ ತೋರದೇ ಸೋಲೊಪ್ಪಿಕೊಂಡಿತು.
ಈ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದು, 2014 ರಿಂದ ಸತತವಾಗಿ ಐಸಿಸಿ ಈವೆಂಟ್ ಗಳಲ್ಲಿ ವಿಫಲವಾಗುತ್ತಿರುವ ಟೀಂ ಇಂಡಿಯಾವನ್ನು ಇನ್ಮುಂದೆ ಜೋಕರ್ಸ್ ಅಂತಾ ಕರೆಯಬಹುದು ಅಂತಾ ಹೇಳಿದ್ದಾರೆ.
ಟೀಂ ಇಂಡಿಯಾವನ್ನು ಜೋಕರ್ಸ್ ಕರೆಯೋದ್ರರಲ್ಲಿ ತಪ್ಪೇನು ಇಲ್ಲ. ಇತ್ತೀಚೆಗೆ ಐಸಿಸಿ ಈವೆಂಟ್ ಗಳಲ್ಲಿ ಕೊನೆಯವರೆಗೂ ಬಂದು ಪಲ್ಟಿ ಹೊಡೆಯುತ್ತಿದ್ದಾರೆ. ಟೀಂ ಇಂಡಿಯಾವನ್ನು ಒಂದು ವಿಚಾರದಲ್ಲಿ ಜೋಕರ್ಸ್ ಅಂತಾ ಕರೆಯಬಹುದು. ಆದ್ರೆ ವ್ಯಕ್ತಿಗತವಾಗಿ ತಂಡದಲ್ಲಿ ಕೆಲವರು ಅಧ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದನ್ನ ಗಮನದಲ್ಲಿಟ್ಟುಕೊಂಡು ನೋಡಿದ್ರೆ ಜೋಕರ್ಸ್ ಅಂತಾ ಕರೆಯೋದು ತಪ್ಪಾಗುತ್ತದೆ. ಇಂಡಿಯಾ ಕೆಟ್ಟ ಪ್ರದರ್ಶನ ನೀಡಿದ್ದನ್ನ ನಾನು ಅಂಗೀಕರಿಸುತ್ತೇನೆ. ಆದ್ರೆ ಕೇವಲ ಒಂದೇ ಒಂದು ಪಂದ್ಯದಿಂದ ಅಷ್ಟೊಂದು ವಿಮರ್ಶಿಸೋದು ಸೂಕ್ತವಲ್ಲ ಎಂದಿದ್ದಾರೆ.
ಅಂದಹಾಗೆ ಕಪಿಲ್ ದೇವ್ ಸಾರಥ್ಯದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ 1983 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಆ ನಂತರ ಎಂ.ಎಸ್.ಧೋನಿ ನೇತೃತ್ವದಲ್ಲಿ 2007ರ ಟಿ 20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013 ಐಸಿಸಿ ಚಾಂಪಿಯನ್ಸ್ ಟ್ರೋಪಿ ಸಾಧಿಸಿದೆ. ಇದಾದ ಬಳಿಕ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಟೀಂ ಇಂಡಿಯಾ ನಿರ್ಣಾಯಕ ಹಂತದಲ್ಲಿ ಸೋಲುಂಡು ನಿರಾಸೆ ಅನುಭವಿಸುತ್ತಿದೆ. 2014ರ ಟಿ 20 ವಿಶ್ವಕಪ್ ಫೈನಲ್, 2015ರ ಏಕದಿನ ವಿಶ್ವಕಪ್ ಸೆಮೀಸ್, 2016 ರ ಟಿ 20 ವಿಶ್ವಕಪ್ ಸೆಮೀಸ್, 2017 ಚಾಂಪಿಯನ್ ಟ್ರೋಫಿ ಫೈನಲ್, 2019 ರ ಏಕದಿನ ವಿಶ್ವಕಪ್ ಸೆಮೀಸ್, ಇದೀಗ 2022ರ ಟಿ 20 ವಿಶ್ವಕಪ್ ನಲ್ಲೂ ಟೀಂ ಇಂಡಿಯಾ ಸೆಮೀಸ್ ನಲ್ಲಿ ಆಟ ಮುಗಿಸಿದೆ.