ADVERTISEMENT
Monday, July 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Teamindia- 2026: 💥 ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨

admin by admin
July 12, 2026
in Newsbeat, Sports
gambir and chapel

gambir and chapel

Share on FacebookShare on TwitterShare on WhatsappShare on Telegram

💥 * ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨

* ಟೀಮ್ ಇಂಡಿಯಾದ ಭವಿಷ್ಯವನ್ನು ಹಾಳು ಮಾಡುತ್ತಿರುವ ಸ್ಯಾಡಿಸ್ಟ್‍ಗಳು ಯಾರು..? 👿

Related posts

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಮೊದಲು ಸಭ್ಯತೆ ಕಲಿಯಿರಿ – ರಾಹುಲ್ ಗಾಂಧಿ ನಾಪತ್ತೆ ಡಿಕೆಶಿ ತಲಾಶ್ : ಡಿಕೆಶಿ ಮತ್ತು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಮೊದಲು ಸಭ್ಯತೆ ಕಲಿಯಿರಿ – ರಾಹುಲ್ ಗಾಂಧಿ ನಾಪತ್ತೆ ಡಿಕೆಶಿ ತಲಾಶ್ : ಡಿಕೆಶಿ ಮತ್ತು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

July 13, 2026
ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

ಡಿ.ಕೆ. ಶಿವಕುಮಾರ್ ಟೆಂಡರ್ ಸಿಎಂ, ರಾಜ್ಯದಲ್ಲಿ ನಡೆಯುತ್ತಿರುವುದು 60 ಪರ್ಸೆಂಟ್ ಸರ್ಕಾರ: ಆರ್ ಅಶೋಕ್ ಗಂಭೀರ ಆರೋಪ

July 13, 2026

* ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ಯಾವ ಯಾವ ವಿಷಪೂರಿತ ಹಾವುಗಳಿವೆ..? 🐍
=======

ಗೌತಮ್ ಗಂಭೀರ್..!
ಒಬ್ಬ ಆಟಗಾರನಾಗಿ, ದೇಶ, ತಂಡ, ಗೆಲುವಿನ ವಿಚಾರದಲ್ಲಿ ಎಂದೆಂದಿಗೂ ತಲೆಬಾಗುವ ಮನುಷ್ಯನೇ ಅಲ್ಲ. ಆತನ ಮೇಲೆ ಎಷ್ಟೇ ಸಿಟ್ಟು, ಕೋಪವಿದ್ರೂ ಈ ವಿಷ್ಯಗಳನ್ನು ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಗಂಭೀರ್‍ನ ಗಂಭೀರವಾದ ಮಹೋನ್ನತವಾದ ಇನಿಂಗ್ಸ್‍ಗಳನ್ನು ಭಾರತೀಯ ಕ್ರಿಕೆಟ್ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ.

ಅದು 2007ರ ಚೊಚ್ಚಲ ಟಿ-20 ವಿಶ್ವಕಪ್ ಫೈನಲ್ ಆಗಿರಬಹುದು, .2011 ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯವೇ ಆಗಿರಬಹುದು. ಟೀಮ್ ಇಂಡಿಯಾದ ಗೆಲುವಿನ ಯಶಸ್ಸಿನಲ್ಲಿ ಗಂಭೀರ್ ಕೊಡುಗೆ ಅನನ್ಯ. ಮುಖದಲ್ಲಿ ಕೆಂಡಕಾರುತ್ತಲೇ ಆಡುವ, ಆ ಹೋರಾಟದ ಮನೋಭಾವನೆಯ ಬಗ್ಗೆ ಎರಡು ಮಾತಿಲ್ಲ. .

ಟೀಮ್ ಇಂಡಿಯಾದ ಮಾರ್ಗದರ್ಶಕನೋ..? ಸರ್ವಾಧಿಕಾರಿಯೋ..?

ಒಬ್ಬ ತರಬೇತುದಾರನಾಗಿ ಗೌತಮ್ ಗಂಭೀರ್ ಸಂಪೂರ್ಣ ವಿಫಲರಾಗಿದ್ದಾರೆ. ಅದೇ ಸಿಡುಕು ಮುಖ. ಹಠಮಾರಿ ವರ್ತನೆ. ತಪ್ಪುಗಳನ್ನು ಒಪ್ಪಿಕೊಳ್ಳದ ಮನಸ್ಥಿತಿ, ಅಹಂಕಾರದ ಮಾತುಗಳು. ಆಟಗಾರರ ಜೊತೆಗೆ ಅಂತರ ಕಾಯ್ದುಕೊಳ್ಳುವುದು. ಒಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ. ಹೀಗಾಗಿ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್‍ನಲ್ಲಿ ಹಿತವಾದ ವಾತಾವರಣವಿಲ್ಲ. ಮನೆಯೊಂದು ಮೂರು ಬಾಗಿಲು ಅಲ್ಲ ಹಲವು ಬಾಗಿಲುಗಳಾಗಿವೆ..!

ಚಾಪೆಲ್ ನಂತ್ರ ಟೀಮ್ ಇಂಡಿಯಾದ ಸ್ಯಾಡಿಸ್ಟ್ ಕೋಚ್ ಗಂಭೀರ್..?
ಮೂರು ಪ್ರತಿಷ್ಠಿತ ಪ್ರಶಸ್ತಿ ಗೆದ್ರೂ, ಕಳೆದ 20 ವರ್ಷಗಳಲ್ಲಿ ಟೀಮ್ ಇಂಡಿಯಾ ಕಂಡ ಅತ್ಯಂತ ಸ್ಯಾಡಿಸ್ಟ್ ಹೆಡ್ ಕೋಚ್ ಎಂಬ ಕುಖ್ಯಾತಿ ಗಂಭೀರ್ ಹೆಸರಿಗೆ ಅಂಟಿಕೊಳ್ಳುತ್ತಿದೆ. ನಿಜ, ಗಂಭೀರ್ ಮಾರ್ಗದರ್ಶನದಲ್ಲಿ 2025ರ ಏಷ್ಯಾಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2026ರ ಟಿ-20 ವಿಶ್ವಕಪ್ ಟೂರ್ನಿಗಳನ್ನು ಗೆದ್ದಿರಬಹುದು.

ಆದ್ರೆ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಇಲ್ಲಿವಯರೆಗೆ ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು. ಆದ್ರೂ ಸೋಲುಗಳನ್ನು ಒಪ್ಪಿಕೊಳ್ಳಲು ಕೂಡ ರೆಡಿ ಇಲ್ಲ. ಪ್ರತಿಯೊಂದಕ್ಕೆ ಸಮರ್ಥನೆಗಳು ಇದ್ದೇ ಇರುತ್ತವೆ. ಹಾಗಂತ ಸಮರ್ಥನೆ ಕೊಡುವುದು ತಪ್ಪು ಅಂತ ಹೇಳುತ್ತಿಲ್ಲ. ಎಲ್ಲದಕ್ಕೂ ಇತಿಮಿಗಳಿರುತ್ತವೆ ಅಲ್ವಾ.?

ಗಂಭೀರ್‍ನ ಗಂಭೀರ ಸರಣಿಗಳು ಸೋಲುಗಳು..! 🤬

ಅದರಲ್ಲೂ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ವೈಟ್‍ವಾಶ್, 27 ವರ್ಷಗಳ ನಂತರ ಲಂಕಾದಲ್ಲಿ ಏಕದಿನ ಸರಣಿಯ ಸೋಲುಗಳನ್ನು ಒಂದು ಹಂತದಲ್ಲಿ ಅಭಿಮಾನಿಗಳು ಸಹಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ನಡೆದ ಐರ್ಲೆಂಡ್ ಮತ್ತು ಇಂಗ್ಲೆಂಡ್‍ನಲ್ಲಿ ಮಹಾ ಮಂಗಳಾರತಿ ಮಾಡಿಕೊಂಡಿರುವುದನ್ನು ಅಭಿಮಾನಿಗಳು ಖಂಡಿತವಾಗಿಯೂ ಸಹಿಸಿಕೊಳ್ಳುತ್ತಿಲ್ಲ. ಇಲ್ಲಿ ಮುಖ್ಯವಾಗಿ ಸೋಲು – ಗೆಲುವಿನ ಪ್ರಶ್ನೆ ಬರಲ್ಲ. ಇಲ್ಲಿ ಗಂಭೀರ್ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ, ವರ್ಕ್‍ಔಟ್ ಆಗದ ಗೇಮ್ ಪ್ಲಾನ್‍ಗಳು, ಅರ್ಥವಾಗದ ಪ್ರಯೋಗಗಳು, ಹೊಂದಾಣಿಕೆಯ ಕೊರತೆ, ಟೀಮ್ ಇಂಡಿಯಾದ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ.

ಗ್ರೆಗ್ ಚಾಪೆಲ್ ತಂತ್ರದ ಹಾದಿಯಲ್ಲಿ ಗೌತಮ್ ಗಂಭೀರ್..?

ಗಂಭೀರ್ ಬಲಿಷ್ಠ ಟೀಮ್ ಇಂಡಿಯಾವನ್ನು ದುರ್ಬಲ ಟೀಮ್ ಇಂಡಿಯಾ ಮಾಡುತ್ತಿದ್ದಾರೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ. ಈ ಹಿಂದೆ ಗ್ರೆಗ್ ಚಾಪೆಲ್ ಕೂಡ ಮಾಡಿದ್ದು ಇದನ್ನೇ. ದ್ರಾವಿಡ್‍ನನ್ನು ಮುಂದಿಟ್ಟುಕೊಂಡು, ಗಂಗೂಲಿ ಮತ್ತು ಸಚಿನ್‍ಗೆ ಸೈಡ್ ಲೈನ್ ಮಾಡಿದ್ದರು. ಹಾಗೇ ಇವತ್ತು, ಗಂಭೀರ್, ಗಿಲ್, ಸ್ಕೈ, ಅಯ್ಯರ್‍ನನ್ನು ಮಂದಿಟ್ಟುಕೊಂಡು ರೋಹಿತ್ ಮತ್ತು ವಿರಾಟ್ ರನ್ನು ಈಗಾಗಲೇ ಟೆಸ್ಟ್ ತಂಡದಿಂದ ಹೊರದಬ್ಬಿದ್ದಾರೆ. ಇದೀಗ ಏಕದಿನ ತಂಡದಿಂದಲೂ ಹೊರಹಾಕುವ ಲೆಕ್ಕಚಾರದಲ್ಲಿದ್ದಾರೆ.

ಅಂದು ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..?

ಮೇಲ್ನೋಟಕ್ಕೆ ಚಾಪೆಲ್ ಮತ್ತು ಗಂಭೀರ್ ನಡೆಯನ್ನು ಗಮನಿಸಿದಾಗ ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಕಾಣುತ್ತಿದೆ.
ಈ ಹಿಂದೆ ಗ್ರೆಗ್ ಚಾಪೆಲ್ ಟೀಮ್ ಇಂಡಿಯಾವನ್ನು 2007ರ ವಿಶ್ವಕಪ್‍ನಲ್ಲಿ ಮಣ್ಣುಮುಕ್ಕಿಸಿದ್ರು. ಹಿರಿಯ ಆಟಗಾರರೊಂದಿಗೆ ಭಿನ್ನಾಭಿಪ್ರಾಯ, ಅನಗತ್ಯ ಪ್ರಯೋಗಗಳನ್ನು ಮಾಡಿದ್ರು. ಹೀಗಾಗಿ ಟೀಮ್ ಇಂಡಿಯಾ ಸೋತಾಗ ಕುಪಿತಗೊಂಡ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ಫೋಟೋಗಳಿಗೆ ಬೆಂಕಿ ಹಾಕಿದ್ರು. ಆಟಗಾರರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ರು. ಇದು ಮರೆತು ಹೋಗಿದ್ರೂ ಮತ್ತೆ ಮತ್ತೆ ನೆನಪಾಗಿ ಆತಂಕವೂ ಮೂಡುತ್ತಿದೆ. ಯಾಕಂದ್ರೆ, ಟೀಮ್ ಮ್ ಇಂಡಿಯಾದ ಸದ್ಯದ ಪರಿಸ್ಥಿತಿಯೂ ಅದೇ ರೀತಿ ಇದೆ.

ದೊಡ್ಡಣ್ಣ ಬಿಸಿಸಿಐ ಯಾಕೆ ಮೌನಕ್ಕೆ ಶರಣಾಗಿದೆ..? 🤫

ಹೌದು, ಸೋತ್ರೂ ಗೆದ್ರೂ ಟೀಮ್ ಇಂಡಿಯಾ ಎಂಬ ಬ್ರ್ಯಾಂಡ್ ಬಿಸಿಸಿಯನ್ನು ಭ್ರಮೆಯಲ್ಲಿ ತೇಲಾಡುವಂತೆ ಮಾಡಿದೆ. ಏನು ಮಾಡಿದ್ರೂ ನಡೆಯುತ್ತೆ ಎಂಬ ಧೋರಣೆಯಲ್ಲಿದೆ. ಟೀಮ್ ಇಂಡಿಯಾದ ಭವಿಷ್ಯವನ್ನು ಅಜಿತ್ ಅಗರ್ಕರ್ ಮತ್ತು ಗಂಭೀರ್ ಕೈಗೆ ಕೊಟ್ಟು, ದುಡ್ಡು ಮಾಡುವುದು ಹೇಗೆ ಎಂಬ ಯೋಚನೆಯಲ್ಲೇ ಇದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಟೀಮ್ ಇಂಡಿಯಾದ ಇತ್ತೀಚಿನ ಕಳಪೆ ಪ್ರದರ್ಶನಗಳ ಬಗ್ಗೆ ಮೌನಕ್ಕೆ ಶರಣಾಗಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ.

ಮೇಜರ್ ಆಪರೇಷನ್ ಟೀಮ್ ಇಂಡಿಯಾ ಆಗಬೇಕಾ..? ಬೇಡ್ವಾ..?

ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಮೇಜರ್ ಆಪರೇಷನ್ ಆಗಲೇಬೇಕಿದೆ. ಟೀಮ್ ಇಂಡಿಯಾವನ್ನು ಹಾಳು ಮಾಡುತ್ತಿರುವ ಕೀಟಾಣುಗಳನ್ನು ಹೊರ ಹಾಕಲೇಬೇಕು. ತಂಡದಲ್ಲಿರುವ ವಿಷಪೂರಿತ ಹಾವುಗಳ ವಿಷ ತೆಗೆಯಲು ಮತ್ತೆ ದೇಸಿ ನೆಲಕ್ಕೆ ಬಿಡಬೇಕು. ಇಲ್ಲ ಅಂದ್ರೆ 2007ರ ಪರಿಸ್ಥಿತಿ ಮತ್ತೆ ಪುನಾರಾವರ್ತನೆಯಾಗುವುದು ಖಚಿತ..!

ಟೀಮ್ ಇಂಡಿಯಾದಲ್ಲಿ ಬದಲಾವಣೆ ಬೇಕಾ..? ಬೇಡ್ವಾ..?🤔
ನಿಮ್ಮ ಅಭಿಪ್ರಾಯವೇನು..?👇

ಸನತ್ ರೈ

Tags: #TeamIndia#GautamGambhir#BCCI#IndianCricket#CricketFans#RohitSharma#ViratKohli#ShreyasIyer#CricketUpdates #sanathrai #saakshatv
ShareTweetSendShare
Join us on:

Related Posts

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಮೊದಲು ಸಭ್ಯತೆ ಕಲಿಯಿರಿ – ರಾಹುಲ್ ಗಾಂಧಿ ನಾಪತ್ತೆ ಡಿಕೆಶಿ ತಲಾಶ್ : ಡಿಕೆಶಿ ಮತ್ತು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಮೊದಲು ಸಭ್ಯತೆ ಕಲಿಯಿರಿ – ರಾಹುಲ್ ಗಾಂಧಿ ನಾಪತ್ತೆ ಡಿಕೆಶಿ ತಲಾಶ್ : ಡಿಕೆಶಿ ಮತ್ತು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

by Shwetha
July 13, 2026
0

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರು...

ಡಿಕೆಶಿ ಕಾಲ್ಗುಣಕ್ಕೇ ರಾಜ್ಯಕ್ಕೆ ಬಂತು ಭೀಕರ ಬರ:ಬರಗಾಲದಲ್ಲೂ ಬೆಂಗಳೂರು ಬಿಟ್ಟು ಕದಲದ ಮಂತ್ರಿಗಳು: ಸರ್ಕಾರದ ಬೇಜವಾಬ್ದಾರಿತನಕ್ಕೆ ಅಶೋಕ್ ಆಕ್ರೋಶ

ಡಿ.ಕೆ. ಶಿವಕುಮಾರ್ ಟೆಂಡರ್ ಸಿಎಂ, ರಾಜ್ಯದಲ್ಲಿ ನಡೆಯುತ್ತಿರುವುದು 60 ಪರ್ಸೆಂಟ್ ಸರ್ಕಾರ: ಆರ್ ಅಶೋಕ್ ಗಂಭೀರ ಆರೋಪ

by Shwetha
July 13, 2026
0

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು...

ದೊಡ್ಡವರಿಗೆ ಬೈದ್ರೆ ಪುಕ್ಸಟ್ಟೆ ಪ್ರಚಾರ ಸಿಗುತ್ತೆ: ವಿನಾಶಕಾಲೇ ವಿಪರೀತ ಬುದ್ಧಿ, ಮಗನ ನಡವಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್-ಮಗನಿಗೆ ಮಲ್ಲಿಕಾರ್ಜುನ ಖರ್ಗೆಯವರು ಬುದ್ಧಿ ಹೇಳಲಿ ಎಂದ ಕನ್ಹೇರಿ ಶ್ರೀ

ದೊಡ್ಡವರಿಗೆ ಬೈದ್ರೆ ಪುಕ್ಸಟ್ಟೆ ಪ್ರಚಾರ ಸಿಗುತ್ತೆ: ವಿನಾಶಕಾಲೇ ವಿಪರೀತ ಬುದ್ಧಿ, ಮಗನ ನಡವಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್-ಮಗನಿಗೆ ಮಲ್ಲಿಕಾರ್ಜುನ ಖರ್ಗೆಯವರು ಬುದ್ಧಿ ಹೇಳಲಿ ಎಂದ ಕನ್ಹೇರಿ ಶ್ರೀ

by Shwetha
July 13, 2026
0

ಆರ್‌ಎಸ್‌ಎಸ್‌ ಎಂಬುದು ದೇಶದಲ್ಲಿ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ಶಕ್ತಿಯುತ ಸಂಘಟನೆಯಾಗಿದ್ದು, ಕೇವಲ ಪ್ರಚಾರಕ್ಕಾಗಿ ಅದರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಕನ್ಹೇರಿ ಶ್ರೀಗಳು ಗೃಹ ಸಚಿವ ಪ್ರಿಯಾಂಕ್...

ಕ್ಯಾಪ್ಟನ್ ಅಲ್ಲ ನಾನು ಲೀಡರ್: ಮೌನವಾಗಿಯೇ ಗುದ್ದು ನೀಡಿದ ಮಿಸ್ಟರ್ 360- ಸೂರ್ಯನ ಹೊಸ ಟಿ ಶರ್ಟ್ ಹಿಂದಿನ ರಹಸ್ಯವೇನು?

ಕ್ಯಾಪ್ಟನ್ ಅಲ್ಲ ನಾನು ಲೀಡರ್: ಮೌನವಾಗಿಯೇ ಗುದ್ದು ನೀಡಿದ ಮಿಸ್ಟರ್ 360- ಸೂರ್ಯನ ಹೊಸ ಟಿ ಶರ್ಟ್ ಹಿಂದಿನ ರಹಸ್ಯವೇನು?

by Shwetha
July 13, 2026
0

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಸೂರ್ಯ ಅವರ ಪತ್ನಿ ದೇವಿಶಾ ಶೆಟ್ಟಿ...

ನೆಹರೂ ಇಂದಿರಾ ಗಾಂಧಿಗೇ ಅಲುಗಾಡಿಸಲು ಆಗದ ಆರ್‌ಎಸ್‌ಎಸ್‌ ಬಗ್ಗೆ ಪ್ರಿಯಾಂಕ್‌ ಬೊಗಳೆ ಬಿಡುತ್ತಿದ್ದಾರಾ?:ಸುದ್ದಿಯಾಗುವ ಹುಚ್ಚು ಬಿಟ್ಟು ಮೊದಲು ತಲೆ ಪರೀಕ್ಷೆ ಮಾಡಿಸಿಕೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಂಡಕಾರಿದ ಜನಾರ್ದನ ರೆಡ್ಡಿ!

ನೆಹರೂ ಇಂದಿರಾ ಗಾಂಧಿಗೇ ಅಲುಗಾಡಿಸಲು ಆಗದ ಆರ್‌ಎಸ್‌ಎಸ್‌ ಬಗ್ಗೆ ಪ್ರಿಯಾಂಕ್‌ ಬೊಗಳೆ ಬಿಡುತ್ತಿದ್ದಾರಾ?:ಸುದ್ದಿಯಾಗುವ ಹುಚ್ಚು ಬಿಟ್ಟು ಮೊದಲು ತಲೆ ಪರೀಕ್ಷೆ ಮಾಡಿಸಿಕೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಂಡಕಾರಿದ ಜನಾರ್ದನ ರೆಡ್ಡಿ!

by Shwetha
July 13, 2026
0

ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸದಾ ಕಾಲ ಸುದ್ದಿಯಲ್ಲಿರಬೇಕು ಎನ್ನುವ ಹಪಹಪಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದಾರೆ. ಅವರೊಬ್ಬ ಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಗಂಗಾವತಿ ಶಾಸಕ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram